ಕೋವಿಡ್ ಲಸಿಕೆ ಬಿಡುಗಡೆ

ಕೋವಿಡ್ ಲಸಿಕೆ ಬಿಡುಗಡೆ

ಬೆಂಗಳೂರು : ಕೊರೋನಾ ಹಾವಳಿ ಆಘಾತಕಾರಿ ಮಟ್ಟದಲ್ಲಿ ಉಲ್ಬಣಗೊಂಡು ಸಾವು ವ್ಯಾಪಕವಾಗುತ್ತಿರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಆ.15ರ ಸ್ವಾತಂತ್ರ‍್ಯ ದಿನಾಚರಣೆ ಒಳಗೆ ಶತಾಯ-ಗತಾಯ ದೇಶದ ಪ್ರಥಮ ಕೊರೋನಾ ನಿಗ್ರಹ ಲಸಿಕೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ಐಸಿಎಂಆರ್ ಜತೆ ಈ ನಿಟ್ಟಿನಲ್ಲಿ ಕೈ ಜೋಡಿಸಿದೆ. ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ಈಗಾಗಲೇ ಸಂಶೋಧನೆ ಅಭಿವೃದ್ಧಿಯಲ್ಲಿರುವ ವೈರಸ್‌ವೊಂದರ ಮೇಲೆ ನಡೆಸಲಾದ ಅಧ್ಯಯನವೊಂದನ್ನು ಆಧರಿಸಿ ಬಿಬಿಐಎಲ್ ಹೊಸ ಲಸಿಕೆಯೊಂದನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ತ್ವರಿತ ಕ್ರಮಗಳನ್ನು ಕೈಗೊಂಡಿದೆ.

ಇದೇ ಉದ್ದೇಶಕ್ಕಾಗಿ ದೇಶದ 12 ಪ್ರಮುಖ ವೈದ್ಯಕೀಯ ಸಂಸ್ಥೆಗಳ ನೆರವು ಕೋರಿದ್ದು, ಆಯಾ ಕೇಂದ್ರಗಳಲ್ಲಿ ನಡೆಯುತ್ತಿರುವ ಕೊರೋನಾ ವೈರಸ್ ನಿಗ್ರಹ ಕುರಿತ ಪ್ರಯೋಗ ಮತ್ತು ಸಂಶೋಧನೆಯನ್ನು ಮತ್ತಷ್ಟು ತೀವ್ರಗೊಳಿಸಿ ಆಗಸ್ಟ್ 15ರೊಳಗೆ ಪರಿಣಾಮಕಾರಿ ಲಸಿಕೆಯೊಂದನ್ನು ಅಭಿವೃದ್ಧಿಪಡಿಸುವಂತೆ ಐಸಿಎಂಆರ್ ಸೂಚನೆ ನೀಡಿದೆ.

Related