ನಾಯಿಗೆ ಸೀಮಂತ ಮಾಡಿದ ದಂಪತಿ!

ನಾಯಿಗೆ ಸೀಮಂತ ಮಾಡಿದ ದಂಪತಿ!

ವಿಜಯಪುರ : ಜಿಲ್ಲೆಯಲ್ಲಿ ಕನ್ನಡ ಪರ ಹೋರಾಟಗಾರ ಪ್ರಕಾಶ ಕುಂಬಾರ ತಮ್ಮ ಮನೆಯ ಸಾಕು ನಾಯಿ ಸೋನುಗೆ ಸೀಮಂತ ಕಾರ್ಯ ಮಾಡಿದ್ದಾರೆ.

ಪ್ರಕಾಶ ಕುಂಬಾರ 6 ತಿಂಗಳ ಹಿಂದೆ ಪೊಮೆರೇನಿಯನ್ ತಳಿಯ ಶ್ವಾನವನ್ನು ಮನೆಗೆ ತಂದಿದ್ದರು. ಇದೀಗ ಆ ಶ್ವಾನ ಗರ್ಭಿಣಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಮರಿಗಳಿಗೆ ಜನ್ಮ ನೀಡಲಿದೆ. ಹೀಗಾಗಿ ಈ ಕ್ಷಣವನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಬೇಕು ಎಂದು ನಿರ್ಧರಿಸಿ ಪ್ರಕಾಶ ಕುಂಬಾರ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಸೇರಿ ಶ್ವಾನಕ್ಕೆ ಸೀಮಂತ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಒಂದಷ್ಟು ಜನ ಸೇರಿ ಶ್ವಾನಕ್ಕೆ ಬಳೆ ತೊಡಿಸಿ ಹಾಡು ಹೇಳಿ, ಹೂವಿನ ಹಾರ ಹಾಕಿ ಸಿಂಗಾರ ಗೊಳಿಸಿದರು. ಸೀಮಂತಕ್ಕೆ ಬಂದವರಿಗೆ ಊಟೋಪಚಾರವನ್ನೂ ಏರ್ಪಡಿಸಲಾಗಿತ್ತು.

Related