ಜಿಲ್ಲೆಯಲ್ಲಿ ಭ್ರಷ್ಟರ ಹಾವಳಿ

ಜಿಲ್ಲೆಯಲ್ಲಿ ಭ್ರಷ್ಟರ ಹಾವಳಿ

ಕೊಪ್ಪಳ :  ನಗರದಲ್ಲಿ ಇರುವ ಸಿಂಡಿಕೇಟ್ ಬ್ಯಾಂಕ್ ಮುಂಭಾಗದ ಆಧಾರ್ ಕಾರ್ಡ್ ಸಲುವಾಗಿ ಇಡೀ ರಾತ್ರಿ ಮಹಿಳೆಯರು, ವಯಸ್ಸಾದ ವ್ಯಕ್ತಿಗಳು ಕಂಡುಬಂದರೂ ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸದೆ ಕಣ್ಣು ಮುಚ್ಚಿ ಕುಳಿತಿದ್ದಾರೆ.

ಸಾಮಾನ್ಯವಾಗಿ ಇಂತಿಂಥ ದಿನಾಂಕದಂದು ಟೋಕನ್ ಕೊಡಲಾಗುವುದು, ಎಂದು ಆಧಾರ್ ನೋಂದಣಿ ಕೇಂದ್ರದಲ್ಲಿ ಸೂಚನೆ ಹಾಕಲಾಗುತ್ತದೆ.  ಮುಂಜಾನೆಯೇ ಜನರು ಸಾಲು ಗಟ್ಟಿ ನಿಲ್ಲುತ್ತಾರೆ. ಇನ್ನು ಬ್ಯಾಂಕ್‌ಗಳಲ್ಲಿ ದಿನಕ್ಕೆ ಕನಿಷ್ಠ 20 ಮಂದಿಗೆ ಆಧಾರ್ ನೋಂದಣಿ ಮಾಡಲಾಗುತ್ತದೆ.

ಮುಂಜಾನೆಯೇ ಎದ್ದು ಬ್ಯಾಂಕ್‌ನ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಜನರು ಒಂದಿಡೀ ದಿನ ಕಾದು ಆಧಾರ್ ನೋಂದಣಿ ಮಾಡಿಸುತ್ತಾರೆ. ಇನ್ನು ನಿಮಗೆ ತುರ್ತಾಗಿ ಆಧಾರ್ ಬೇಕಿದ್ದರೆ ೫೦೦ ರೂಪಾಯಿ ಕೊಡಿ ಟೋಕನ್ ಕೊಡುತ್ತೇನೆ ಎಂದು ಭರವಸೆ ನೀಡುತ್ತಾರೆ.

ಸಂಪಾದಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಆದ ಬಸವರಾಜ ಮರದೂರ ಮಾತನಾಡಿ ಭ್ರಷ್ಟ ವ್ಯವಸ್ಥೆ ಹಾಗೂ ಅಧಿಕಾರಿಗಳ ನಿರ್ಲಕ್ಷಕ್ಕೆ ಕಳವಳ ವ್ಯಕಪಡಿಸಿದರು ಕೂಡಲೇ ಇಂತಹ ಬ್ರೋಕರ್ ಹಾವಳಿ ತಪ್ಪಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Related