ಕೊರೋನ ಮುಂಜಾಗೃತೆ ಅಗತ್ಯ

  • In State
  • April 4, 2020
  • 247 Views
ಕೊರೋನ ಮುಂಜಾಗೃತೆ ಅಗತ್ಯ

ಬಾದಾಮಿ, ಏ. 4: ಮಾರಕ ಕೊರೋನ ವೈರಸ್ ಹರಡದಂತೆ ಎಲ್ಲರೂ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ ಎಂದು ಗ್ರಾ.ಪಂ.ನೋಡಲ್ ಅಧಿಕಾರಿಯೂ ಮಲ್ಲಿಕಾರ್ಜುನ ಮಾಗಿ ತಿಳಿಸಿದರು. ಅವರು ಕೆಂದೂರ ಗ್ರಾಮ ಪಂಚಾಯತ ವ್ಯಾಪ್ತಿಯ ಕೆಂದೂರ, ತಾಂಡಾ ಮತ್ತು ಕುಟುಕನಕೇರಿ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ಕೊರೋನ ರೋಗದ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು. ನಿಮ್ಮ ಮನೆಯ ಸುತ್ತಮುತ್ತಲೂ ಯಾರಾದರೂ ಮಂಗಳೂರು, ಗೋವಾ, ಕಾಸರಗೋಡು, ಬೆಂಗಳೂರು ಸೇರಿದಂತೆ ಬೇರೆ ರಾಜ್ಯದಿಂದ ಬಂದಿದ್ದರೆ ಕೂಡಲೇ ನಮಗೆ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಕೊರೋನ ವೈರಸ್ ವೇಗವಾಗಿ ಹರಡುತ್ತದೆ. ಇದೊಂದು ಸೊಂಕು ರೋಗವಾಗಿರುವುದರಿಂದ ನಿಮ್ಮ ಮನೆಯಲ್ಲಿ ಸೇರಿದಂತೆ ಗ್ರಾಮದಲ್ಲಿ ಜಾಗೃತಿಯಿಂದ ಇರಬೇಕು ಎಂದು ಹೇಳಿದರು. ಕೆಂದೂರ, ತಾಂಡಾ ಮತ್ತು ಕುಟಕನಕೇರಿ ಗ್ರಾಮದಲ್ಲಿ ಇದುವರೆಗೂ ಮಂಗಳೂರು, ಗೋವಾ, ಕಾಸರಗೋಡಿನಿಂದ ೨೧೬ ಜನರು ಗ್ರಾಮಕ್ಕೆ ಬಂದಿದ್ದು, ಇವರೆಲ್ಲರನ್ನು ಆರೋಗ್ಯ ಇಲಾಖೆ ಮೂಲಕ ಪರೀಕ್ಷೆ ಮಾಡಲಾಗಿದೆ. ಯಾರಿಗೂ ಸೊಂಕು ಕಂಡು ಬಂದಿಲ್ಲ ಎಂದು ಮಾಹಿತಿ ನೀಡಿದರು. ಅಂಗನವಾಡಿ, ಆಶಾ ಕಾರ್ಯಕರ್ತರು, ಪಿಡಿಒ ಸೇರಿದಂತೆ ಊರಿನ ಯುವಕರು ಹಾಜರಿದ್ದರು.

Related