ಪ್ರಯಾಣಿಕರಿಗೆ ಓಡಾಡಲು ಕಾಡುತ್ತಿದೆ ಕೊರೋನಾ ಭಯ!

ಪ್ರಯಾಣಿಕರಿಗೆ ಓಡಾಡಲು ಕಾಡುತ್ತಿದೆ ಕೊರೋನಾ ಭಯ!

ಬೆಂಗಳೂರು : ಬಿಎಂಟಿಸಿ,ಕೆಎಸ್ ಆರ್ ಟಿಸಿ ಬಸ್ಸುಗಳ ಓಡಾಟ ಭಾಗಶಃ ಆರಂಭವಾಗಿದ್ದು, ಬಸ್ಸುಗಳ ಸಂಚಾರದಲ್ಲಿ ಜನರಿಂದ ನೀರವ ಮೌನ ಆವರಿದೆ. ಈ ಬಗ್ಗೆ ಮಾತನಾಡಿದ ಬಿಎಂಟಿಸಿ ವಕ್ತಾರರೊಬ್ಬರು, ನಿನ್ನೆ 1,500 ಬಸ್ಸುಗಳ ಸಂಚಾರ ನಡೆಸಲಾಗಿತ್ತು. ಪ್ರಯಾಣಿಕರು ಸಂಚರಿಸುವಾಗ ನಿಂತುಕೊಳ್ಳಲು ಅವಕಾಶವಿರಲಿಲ್ಲ. ಟಿಕೆಟ್ ಗೆ ಬದಲಾಗಿ ಪ್ರಯಾಣಿಕರು 70 ರೂಪಾಯಿಯ ದಿನದ ಪಾಸು ಅಥವಾ 300 ರೂಪಾಯಿಯ ವಾರದ ಪಾಸ್ ತೆಗೆದುಕೊಳ್ಳಬೇಕು. ಬಸ್ಸುಗಳನ್ನು ಮತ್ತು ಕೆಂಪೇಗೌಡ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಲಾಗಿದೆ. ಪ್ಲಾಟ್ ಫಾರಂಗಳಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಗಳ ಪೈಂಟಿಂಗ್ ಮಾಡಲಾಗಿದೆ. ಅದರೊಳಗೆ ಪ್ರಯಾಣಿಕರು ನಿಂತು ಬಸ್ಸಿಗೆ ಹತ್ತಬೇಕು ಎಂದರು.

ಹುಬ್ಬಳ್ಳಿಯಲ್ಲಿ ವಾಯವ್ಯ ಸಾರಿಗೆ ವಿಭಾಗದ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ್ ಕುಮಾರ್ ವಿ ಎಚ್, 1200 ಶೆಡ್ಯೂಲ್ ಗಳಲ್ಲಿ ಸಂಚಾರ ಮಾಡಲು ನರ‍್ಧರಿಸಲಾಗಿತ್ತಾದರೂ ಕೊನೆಗೆ 1,100 ಶೆಡ್ಯೂಲ್ ಮಾತ್ರ ನರ‍್ವಹಿಸಲಾಯಿತು. ಇಂದಿನಿಂದ ಜನರ ಬೇಡಿಕೆ ನೋಡಿಕೊಂಡು ಹೆಚ್ಚಿನ ಶೆಡ್ಯೂಲ್ ಮಾಡಲಾಗುವುದು ಎಂದರು. ಬೆಳಗಾವಿಯಲ್ಲಿ ಜನರು ಕೊರೋನಾ ಭಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮನೆ ಬಿಟ್ಟು ಹೊರ ಬರಲಿಲ್ಲ. ಬೆಳಗಾವಿಯಿಂದ ನಿನ್ನೆ ಎರಡು ಬಸ್ಸುಗಳು ಬೆಂಗಳೂರು, ವಿಜಯಪುರಕ್ಕೆ ಮೂರು ಬಸ್ಸುಗಳು ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಸಂಚರಿಸಿದವು.

Related