ಕೊರೋನಾದಿಂದ ಒಂದೇ ಮನೆಯಲ್ಲಿ 3 ಸಾವು

ಕೊರೋನಾದಿಂದ ಒಂದೇ ಮನೆಯಲ್ಲಿ 3 ಸಾವು

ಬೊಮ್ಮನಹಳ್ಳಿ: ಕೊರೋನಾದಿಂದ ನರಳುತ್ತಿರುವ ಸಾರ್ವಜನಿಕರನ್ನು ರಕ್ಷಿಸಬೇಕೆಂಬ ಉದ್ದೇಶದಿಂದ ಜನರ ಪ್ರಾಣವನ್ನು ಕಾಪಾಡಲು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಸತತ ಮೂರು ತಿಂಗಳ ಹಿಂದೆ ಬೊಮ್ಮನಹಳ್ಳಿ ವಲಯದ ಹೊಂಗಸಂದ್ರದಲ್ಲಿ ಕಂಟೋನ್ಮೆಂಟ್ ಝೋನ್‍ನ್ನು ಯಶಸ್ವಿಯಾಗಿ ನಿರ್ವಹಿಸಿ ಸುಮಾರು 500ಕ್ಕೂ ಹೆಚ್ಚು ಮಂದಿಯನ್ನು ಕೊರೋನಾದಿಂದ ರಕ್ಷಿಸಿ, 120 ಜನರನ್ನು ಹೋಂ ಕ್ವಾರಂಟೈನ್ ಮಾಡಿ ಸಕ್ರೀಯ ಚಿಕಿತ್ಸೆ ನೀಡುವ ಮೂಲಕ ಡಾ. ನಾಗೇಂದ್ರ ಅವರು ಹೊರರಾಜ್ಯದಿಂದ ಬಂದು ನೆಲೆಸಿರುವ ಕೂಲಿ ಕಾರ್ಮಿಕರಲ್ಲಿ ಯಾವುದೇ ಸಾವು ಸಂಭವಿಸದ ಹಾಗೆ ನೋಡಿಕೊಂಡು ಅವರ ರಾಜ್ಯಕ್ಕೆ ಕಳುಹಿಸಿಕೊಡಬೇಕಾದ ಸಂದರ್ಭದಲ್ಲಿ ದಿನಸಿ ಕಿಟ್ ಸ್ಯಾನಿಟೈಸರ್ , ಮಾಸ್ಕ ಇನ್ನಿತರ ಸಾಮಾಗ್ರಿಗಳನ್ನು ನೀಡುವ ಮೂಲಕ ನೀವು ಧೈರ್ಯವಾಗಿರಿ, ನಿಮಗೆ ಕೊರೋನಾ ಬಂದರೂ ಏನು ಆಗುವುದಿಲ್ಲ, ನಾನು ನಿಮ್ಮೊಂದಿಗಿದ್ದೇವೆ ಎಂಬ ಮಾನಸಿಕ ಸ್ಥೈರ್ಯ ತುಂಬಿ ಕೊರೋನಾ ಬಾಧಿತನಾಗಿ ಸತತ ಒಂದು ತಿಂಗಳುಗಳ ಕಾಲ ಕೊರೋನಾ ಚಿಕಿತ್ಸೆಯನ್ನು ಪಡೆಯುತ್ತಿರುವ ಸಂದರ್ಭದಲ್ಲಿ ಹೆತ್ತ ತಂದೆ ತಾಯಿಯ ಆರೋಗ್ಯವನ್ನು ಲೆಕ್ಕಿಸದೆ ಜನರ ಆರೋಗ್ಯವನ್ನು ಕಾಪಾಡಲು ಮುಂದಾಗಿರುವ ಡಾ. ನಾಗೇಂದ್ರ ಅವರ ಮನೆಯಲ್ಲಿ ನಡೆಯಬಾರದ ಘಟನೆ ನಡೆದಿದೆ.

ಕೊರೋನಾದಿಂದ ತಂದೆ, ತಾಯಿ, ಭಾವ ಒಂದೇ ಮನೆಯಲ್ಲಿ ಮೂವರನ್ನು ಒಂದು ವಾರದಲ್ಲೇ ಕಳೆದುಕೊಂಡಿರುವ ದುರ್ಘಟನೆ ಇಂದು ನಡೆದಿದೆ.
ಬೊಮ್ಮನಹಳ್ಳಿ ಬಿಬಿಎಂಪಿ ಆರೋಗ್ಯಾಧಿಕಾರಿ ನಾಗೇಂದ್ರ ಎಂಬುವವರಿಗೆ ಕೊರೋನಾ ದೃಢಪಟ್ಟಿದ್ದು, ಅವರ ಒಂದೇ ಮನೆಯ ಮೂವರು ಸಾವನ್ನಪ್ಪಿದ್ದಾರೆ.
ನಾಗೇಂದ್ರ ಅವರ ತಂದೆ, ತಾಯಿ ಮತ್ತು ಭಾವ ಮೃತ ದುದ್ರ್ರೈವಿಗಳಾಗಿದ್ದು, ಇವರು ಮಗನಿಂದ ಕೊರೋನಾ ಸೋಂಕಿತರಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ನಾಗೇಂದ್ರ ಅವರ ಭಾವರವರೂ ಸಹ ನೂರಾರು ಜನ ಕೊರೋನಾ ಮುಕ್ತರನ್ನಾಗಿ ಮಾಡಿ, ಕೊನೆಗೆ ಕೊರೋನಾ ವಾರಿಯರ್ ಆಗಿ ಮೃತಪಟ್ಟಿದ್ದು ದುರದೃಷ್ಟಕರ. ಇವರ ಕುಟುಂಬ ಕನಕಪುರ ರಸ್ತೆಯ ಸಾರಕ್ಕಿಯಲ್ಲಿ ನೆಲೆಸಿದ್ದು, ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ಬಿಹಾರಿ ಬಾಬು ಎಂಬುವನಿಂದ ಹೊಂಗಸಂದ್ರದಲ್ಲಿ ಕೊರೋನಾ ಸೋಂಕಿತನಿಂದ ಇಡೀ ಪ್ರಕರಣದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿರುವ ಡಾ. ನಾಗೇಂದ್ರ ಬೊಮ್ಮನಹಳ್ಳಿ ವಲಯದ ಆರೋಗ್ಯಾಧಿಕಾರಿ ಒಂದೇ ಒಂದು ಸಾವಿಲ್ಲದೇ ಸಮರ್ಥವಾಗಿ ಸಾರ್ವಜನಿಕರನ್ನು ಕಾಪಾಡಿರುವ ಆರೋಗ್ಯಾಧಿಕಾರಿ ಮನೆಯಲ್ಲೂ ಕೊರೋನಾದಿಂದಲೇ ಇಡೀ ಮನೆಯಲ್ಲಿ ಮೂರು ಸಾವು ಸಂಭವಿಸಿರುವುದು ನೋವು ತಂದಿರುವ ವಿಷಯವಾಗಿದೆ. ಇದನ್ನು ಕಂಡ ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಅವರ ಕುಟುಂಬಕ್ಕೆ ನಡೆದಿರುವ ಅನ್ಯಾಯ ಎಂದು ಬೇಸರ ವ್ಯಕ್ತಪಡಿಸಿದರು.
ನಿಜವಾದ ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸಿರುವ ನಾಗೇಂದ್ರ ಅವರ ಸೇವೆ ಶ್ಲಾಘನೀಯ ಎಂದರು.

Related