ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ರಚನೆ

ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ರಚನೆ

ಜೇವರ್ಗಿ : ಕಲ್ಯಾಣ ಕರ್ನಾಟಕ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸುನಿಲ್ ಹುಡುಗಿ ನೇತೃತ್ವದಲ್ಲಿ ಜೇವರ್ಗಿ ತಾಲೂಕು ಸಮಿತಿ ರಚಿಸಲಾಯಿತು.

ತಾಲೂಕಿನ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, 2015ರವರೆಗೆ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು ಸೇರಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರದ ಅನುದಾನ ಪಡೆಯುವಲ್ಲಿ ಒಕ್ಕೂಟದ ಹೋರಾಟ ಅನಿವಾರ್ಯ ಎಂದು ಜಿಲ್ಲಾ ಅಧ್ಯಕ್ಷರು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾಗಿ ಮಹಮ್ಮದ್ ಇಬ್ರಾಹಿಂ ಪಟೇಲ್, ಗೌರವಾಧ್ಯಕ್ಷರಾಗಿ ಮಹಾಂತಯ್ಯ ಹಿರೇಮಠ್, ಪ್ರಧಾನ ಕಾರ್ಯದರ್ಶಿಗಳಾಗಿ ಸಾಹೇಬಗೌಡ ಕಡ್ಲೆ, ಉಪಾಧ್ಯಕ್ಷರಾಗಿ ರವಿ ಗೋಲ್ಡ್ ಸ್ಮಿತ್, ತ್ರಿಮೂರ್ತಿ ಮುತ್ತಣ್ಣ, ಭೀಮರಾಯ ಗುಜಗೊಂಡ, ಆನಂದ್ ಭಾಸ್ಕರ್, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರಕಾಶ್ ಸುಂಬಡ, ನಿಂಗಣ್ಣ ಮಯೂರ, ನಾಗಭೂಷಣ, 371 (ಜೇ) ಸಂಚಾಲಕರಾಗಿ ರಾಜು ಮುದ್ದಡಗಿ, ಕನ್ನಡ ಮಾಧ್ಯಮ ಶಾಲೆಗಳ ಸಂಚಾಲಕರಾಗಿ ಗುಂಡಣ್ಣ ಬಡಿಗೇರ್ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಒಕ್ಕೂಟದ ಅಧ್ಯಕ್ಷ ಸುನಿಲ್ ಹುಡುಗಿ ತಿಳಿಸಿದ್ದಾರೆ.

Related