ಅಧಿಕಾರಿಗಳ ಕಮಿಷನ್ ದುರಾಸೆಗೆ ಗುತ್ತಿಗೆದಾರರೊಂದಿಗೆ ಒಳ ಒಪ್ಪಂದ!

ಅಧಿಕಾರಿಗಳ ಕಮಿಷನ್ ದುರಾಸೆಗೆ ಗುತ್ತಿಗೆದಾರರೊಂದಿಗೆ ಒಳ ಒಪ್ಪಂದ!

ಬೆಂಗಳೂರು:  ಇತ್ತೀಚಿಗೆ ರಾಜ್ಯದಲ್ಲಿ ಅಧಿಕಾರಿಗಳು ಕಮಿಷನ್ ದುರಾಸೆಗೆಂದು ಗುತ್ತಿಗೆದಾರರೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ ಎಂದು ಡಾ. ಬಿ. ಆರ್. ಅಂಬೇಡ್ಕರ್ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರಾದ ಅರುಣ್ ಅವರು ಹೇಳಿದರು.

ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಸರ್ಕಾರಿ ಸೌಮ್ಯದ ಕೆ.ಐ.ಎ.ಡಿ.ಬಿ ಇಲಾಖೆಯ ಮೂಲ ಸೌಲಭ್ಯಗಳ ಭಾಗವಾದ ವಿದ್ಯುತ್ ಇ – ಪ್ರಕ್ಯೂರಿಮೆಂಟ್ ಟೆಂಡರ್‌ಗಳ ಕಾಮಗಾರಿಗಳಲ್ಲಿ ಮಾನ್ಯ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿಯ ನಿರ್ಲಕ್ಷ ಹಾಗೂ ಅಧಿಕಾರದ ದುರುಪಯೋಗದಿಂದ ಬಹು ಕೋಟಿ ಭ್ರಷ್ಟಾಚಾರವೆಸಗಿದ ಅಧಿಕಾರಿಗಳ ಕಮಿಷನ್ ದುರಾಸೆಗೆ ಗುತ್ತಿಗೆದಾರರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸಾರ್ವಜನಿಕರ ತೆರಿಗೆ ಹಣ ಕೋಟಿಗಟ್ಟಲೆ ಲೂಟಿ ಮಾಡಿರುವುದು ಈ ರಾಜ್ಯದ ಜನಸಾಮಾನ್ಯರಿಗೆ ಹಾಗೂ ಸರ್ಕಾರಕ್ಕೆ ಮಾಡಿರುವ ಬಹುದೊಡ್ಡದ್ರೋಹ ಮತ್ತು ಖಂಡನೀಯ.

ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ದಿ ಮಂಡಳಿ ವತಿಯಿಂದ 2022-2023 ನೇ ಸಾಲಿನಲ್ಲಿ ನಕಲಿ ಲೈಸನ್ಸ್ ಮತ್ತು ಬ್ಯಾಂಕ್ ಎಫ್.ಡಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿರುವ ಅನರ್ಹ ಗುತ್ತಿಗೆದಾರರಾದ ಮೆ/ಗೀತಾ ಎಲೆಕ್ಟ್ರಾನಿಕ್ಸ್, ಮೆ/ಕುಮಾರ್ ಎಲೆಕ್ಟ್ರಾನಿಕ್ಸ್, ಮೆ/ಅರವಿಂದ್ ಎಲೆಕ್ಟ್ರಾನಿಕ್ಸ್ ಅವರಿಗೆ ಅಕ್ರಮವಾಗಿ ಟೆಂಡ‌ರ್ ಹಂಚಿಕೆ ಮಾಡಿದ್ದು ಅಲ್ಲದೇ ಸದರಿ ಟೆಂಡರ್‌ಗಳನ್ನು ದುಪ್ಪಟ್ಟು ಅಂದಾಜು ಪಟ್ಟಿ ತಯಾರಿಸಿ ಅತಿ ಹೆಚ್ಚುವರಿ ದರಗಳಿಗೆ ತರಾತುರಿಯಲ್ಲಿ ಟೆಂಡ‌ರ್ ಪ್ರಕ್ರಿಯೆ ನಡೆಸಿ ನೀತಿ ಸಂಹಿತೆ ಜಾರಿಗೆ ಮುನ್ನವೇ ಕಾರ್ಯದೇಶ ನೀಡಿದ್ದು ಕೆ.ಟಿ.ಟಿ.ಪಿ ಕಾಯ್ದೆ ಉಲ್ಲಂಘನೆಯಾಗಿರುತ್ತದೆ ಎಂದರು.

 

Related