ಮುಖ್ಯಮಂತ್ರಿ ರೈತ ವಿಧ್ಯಾನಿಧಿ ಕಾರ್ಯಕ್ರಮ

ಮುಖ್ಯಮಂತ್ರಿ ರೈತ ವಿಧ್ಯಾನಿಧಿ ಕಾರ್ಯಕ್ರಮ

ಕೊಟ್ಟೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ ನಂತರ ಪ್ರಥಮವಾಗಿ ನಾಡಿನ ಅನ್ನದಾತ ರೈತರು ಮತ್ತು ಸಮಾಜದ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಕೈಗೊಂಡ ಪ್ರಧಾನ ಪಂಚ ಕಾರ್ಯಕ್ರಮಗಳ ಪೈಕಿ ಮೊದಲನೇ ಕಾರ್ಯಕ್ರಮ “ಮುಖ್ಯಮಂತ್ರಿ ರೈತ ವಿಧ್ಯಾ ನಿಧಿ”. ರಾಜ್ಯದ ರೈತಾಪಿ ಮಕ್ಕಳ ಉನ್ನತ ವ್ಯಾಸಂಗಕ್ಕೆಂದೆ ಜಾರಿಗೆ ತಂದಿರುವ ವಿಶಿಷ್ಟ ಕಾರ್ಯಕ್ರಮವನ್ನು ಭಾನುವಾರ ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್ ನಲ್ಲಿ ಲೋಕಾರ್ಪಣೆ ಮಾಡಲಾಯಿತು.

ಈ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ತಾಲೂಕಿನ ಎ.ಪಿ.ಎಂ.ಸಿ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದ ವತಿಯಿಂದ “ಮುಖ್ಯಮಂತ್ರಿ ರೈತ ವಿದ್ಯಾನಿಧಿ” ಕಾರ್ಯಕ್ರಮವನ್ನು ಯುಟ್ಯೂಬ್ ಚಾನೆಲ್ ಮುಖಾಂತರ ತಾಲೂಕಿನ ರೈತ ಬಾಂಧವರಿಗೆ ಕರೆ ನೀಡಿ ಕಾರ್ಯಕ್ರಮವನ್ನು ಟಿ.ವಿ ಮೂಲಕ ನೇರ ಪ್ರಸಾರವನ್ನು ವೀಕ್ಷಿಸಲಾಯಿತು.ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ ರೈತರ ಮಕ್ಕಳು ಮುಂದಿನ ವಿಧ್ಯಾಭ್ಯಾಸದ ಕನಸು ಕೈಗೂಡಲು ಪ್ರತಿವರ್ಷ ಶಿಷ್ಯವೇತನ ಒದಗಿಸುವ ನೆರವಿನ ಕಾರ್ಯಕ್ರಮವಿದು.ವಾರ್ಷಿಕ ಶಿಷ್ಯವೇತನವನ್ನು ರೈತರ ಮಕ್ಕಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗುವುದು ಎಂದು ರೈತರ ಮಕ್ಕಳಿಗೆ ಆಗುವ ಅನುಕೂಲಗಳು ಮತ್ತು ಪ್ರೋತ್ಸಾಹ ಧನವನ್ನು ಪಡೆಯುವುದು ಹೇಗೆ ಎಂದು ಈ ಕಾರ್ಯಕ್ರಮದಲ್ಲಿ ಮಾನ್ಯ ಕೃಷಿ ಸಚಿವ ಬಿ.ಸಿ ಪಾಟೀಲ್ ರವರು ಸಂಪೂರ್ಣವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಶ್ಯಾಮ್ ಸುಂದರ್, ಲೆಕ್ಕಸಹಾಯಕ ತಿಮಣ್ಣ, ರೈತ ಸಂಪರ್ಕ ಸಿಬ್ಬಂದಿಯವರು, ರೈತ ಭಾಂದವರು, ಉಪಸ್ಥಿತರಿದ್ದರು.

Related