‘ಚಂದನ’ದ ‘ಗೊಂಬೆ’ಯ ಕಲ್ಯಾಣ

‘ಚಂದನ’ದ ‘ಗೊಂಬೆ’ಯ ಕಲ್ಯಾಣ

ಮೈಸೂರು, ಫೆ. 26 : ಬೆಳಗ್ಗೆ 9 ಗಂಟೆಗೆ ಧಾರಾಮುಹೂರ್ತದಲ್ಲಿ ನಿವೇದಿತಾ ಗೌಡಗೆ, ಚಂದನ್ ಶೆಟ್ಟಿ ಮಾಂಗಲ್ಯ ಕಟ್ಟಿದ್ದಾರೆ. ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಹಿನಕಲ್ನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ನಲ್ಲಿ ವಿವಾಹ ಸಮಾರಂಭ ನಡೆದಿದೆ. ಮೀನಾ ಲಗ್ನದಲ್ಲಿ ಆಪ್ತರು, ಸ್ನೇಹಿತರು, ಹಿತೈಷಿಗಳ ಸಮ್ಮುಖದಲ್ಲಿ ಚಂದನ್ಶೆಟ್ಟಿ ನಿವೇದಿತಾಗೆ ಮಾಂಗಲ್ಯಧಾರಣೆ ಮಾಡಿದ್ದಾರೆ.
ಗೌಡ ಹಾಗೂ ಶೆಟ್ಟಿ ಸಂಪ್ರದಾಯಗಳೆರಡರಲ್ಲೂ ಮದುವೆ ಶಾಸ್ತ್ರಗಳು ನಡೆಯುತ್ತಿವೆ. ನಿನ್ನೆ ಈ ಜೋಡಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಅಶ್ವಿನಿ ಪುನೀತ್, ಧ್ರುವ ಸರ್ಜಾ, ಪ್ರೇರಣಾ ಶಂಕರ್, ನಿರ್ದೇಶಕ ಚೇತನ್ ಕುಮಾರ್, ಶೈನ್ ಶೆಟ್ಟಿ, ಶ್ರೇಯಸ್ ಮಂಜು, ನಿರ್ದೇಶಕ ರಘು ಶಾಸ್ತ್ರಿ, ನಿರೂಪಕ ಅಕುಲ್ ಬಾಲಾಜಿ ಮುಂತಾದವರು ನವಜೋಡಿಗೆ ಹಾರೈಸಿದ್ದಾರೆ.

ನಿವೇದಿತಾ ಗುಲಾಬಿ ಮತ್ತು ಹಸಿರು ಬಣ್ಣದ ಸೀರೆಯನ್ನುಟ್ಟು ಕೊಂಗೊಳಿಸುತ್ತಿದ್ದಾರೆ. ಎಲ್ಲರ ಸಮ್ಮುಖದಲ್ಲಿ ನಿವೇದಿತಾ ಮತ್ತು ಚಂದನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಕೂಡ ಈ ಮದುವೆ ಸಮಾರಂಭಕ್ಕೆ ಸ್ಯಾಂಡಲ್ವುಡ್ನ ಹಲವು ಕಲಾವಿದರು ಭಾಗಿಯಾಗುವ ನಿರೀಕ್ಷೆಯಿದೆ.

Related