CET ಪಲಿತಾಂಶ ಪ್ರಕಟ- ವಿದ್ಯಾರ್ಥಿನಿಯರೇ ಮೇಲುಗೈ…

CET ಪಲಿತಾಂಶ ಪ್ರಕಟ- ವಿದ್ಯಾರ್ಥಿನಿಯರೇ ಮೇಲುಗೈ…

ಬೆಂಗಳೂರು ಜು 30 : 2021-22ನೇ ಸಾಲಿನಲ್ಲಿ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ KEA ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ಮಾಡಿದರು. ಸಿಇಟಿ ಪರೀಕ್ಷೆಗೆ ಸುಮಾರು 2.16 ಲಕ್ಷ ವಿದ್ಯಾರ್ಥಿಗಳು ನೋಂದಣಿ ಆಗಿದ್ದರು. ಈಪೈಕಿ 2.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಎಂಜಿನಿಯರ್ ಗೆ – 1,71,656 ರ್ಯಾಂಕ್, ಕೃಷಿ ಕೋರ್ಸ್ ಗೆ 1,39,968 ರ್ಯಾಂಕ್, ಪಶುಸಂಗೋಪನೆ ಕೋರ್ಸ್ ಗೆ 1,42,820 ರ್ಯಾಂಕ್, ಯೋಗ ಮತ್ತು ನ್ಯಾಚುರೋಪತಿಗೆ 1,42,750 ರ್ಯಾಂಕ್ ಮತ್ತು ಬಿ ಫಾರ್ಮ್ ಗೆ 1,74,568 ರ್ಯಾಂಕ್ ನೀಡಲಾಗಿದೆ. ವಿಶೇಷ ಅಂದ್ರೆ 5 ಕೋರ್ಸ್ನ ಟಾಪ್ 9 ರ್ಯಾಂಕ್ಗಳನ್ನು ಬಹುತೇಕ ಬೆಂಗಳೂರಿನ ವಿದ್ಯಾರ್ಥಿಗಳು ಪಡೆದಿದ್ದಾರೆ.

ಈ ಬಾರಿ 7 ಅಂಕ ಗ್ರೇಸ್ ನೀಡಲಾಗಿದೆ. ಗಣಿತಕ್ಕೆ 5, ಭೌತಶಾಸ್ತ್ರ, ಮತ್ತು ರಸಾಯನಶಾಸ್ತ್ರಕ್ಕೆ ತಲಾ 1 ಅಂಕ ಗ್ರೇಸ್ ನೀಡಲಾಗಿದೆ. ಆಗಸ್ಟ್ 5 ರಿಂದ ದಾಖಲಾತಿ ಪರಿಶೀಲನೆ ಪ್ರಕ್ರಿಯೆಪ್ರಾರಂಭವಾಗಲಿದ್ದು, ಸಂಪೂರ್ಣ ಆನ್ ಲೈನ್ ಮೂಲಕ ಪ್ರಕ್ರಿಯೆ ನಡೆಯಲಿದೆ. ಈ ವರ್ಷ ಸುಮಾರು 1.08 ಲಕ್ಷ ಸೀಟುಗಳು ಎಂಜಿನಿಯರಿಂಗ್ ನಲ್ಲಿ ಲಭ್ಯವಿದ್ದು, 57 ಸಾವಿರಕ್ಕೂ ಹೆಚ್ಚು ಸೀಟು ಸರ್ಕಾರದ ಕೋಟಾಗೆ ಸಿಗಲಿವೆ ಎಂದು ಸಚಿವ ಅಶ್ವಥ್ ನಾರಾಯಣ ತಿಳಿಸಿದರು.

ಎಂಜಿನಿಯರಿಂಗ್ ವಿಭಾಗದಲ್ಲಿ ಯಲಹಂಕದ ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ಅಪೂರ್ವ ಟಂಡನ್ ಮೊದಲ ರ್ಯಾಂಕ್ ಪಡೆದಿದ್ದು, ಎರಡನೇ ಹಾಗೂ ಮೂರನೇ ಸ್ಥಾನವನ್ನು ಮಾರತ್ಹಳ್ಳಿಯ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್ನ ವಿದ್ಯಾರ್ಥಿಗಳಾದ ಸಿದ್ದಾರ್ಥ ಸಿಂಗ್ ಹಾಗೂ ಆತ್ಮಕುರಿ ವೆಂಕಟ ಮಾದ್ ಕ್ರಮವಾಗಿ ಪಡೆದಿದ್ದಾರೆ.

Related