ಬಿವೈ ವಿಜಯೇಂದ್ರ ಕೈ ಕೆಳಗೆ ಕೆಲಸ ಮಾಡೋದು ಹೇಗೆ: ರಮೇಶ್ ಜಾರಕಿಹೊಳಿ

ಬಿವೈ ವಿಜಯೇಂದ್ರ ಕೈ ಕೆಳಗೆ ಕೆಲಸ ಮಾಡೋದು ಹೇಗೆ: ರಮೇಶ್ ಜಾರಕಿಹೊಳಿ

ಬೆಳಗಾವಿ: ರಾಜ್ಯ ಬಿಜೆಪಿಯಲ್ಲಿ ಅರಸನಿಲ್ಲದ ಆಳ್ವಿಕೆಯಂತೆ ಇಷ್ಟು ದಿನ ಬಿಜೆಪಿ ಪಕ್ಷ ರಾಜಕೀಯ ಮಾಡುತ್ತಿತ್ತು ಆದರೆ ಈಗ ಬಿಜೆಪಿ ಪಕ್ಷಕ್ಕೆ ಅರಸ ಸಿಕ್ಕಂತಾಗಿದೆ.

ಹೌದು ನಿನ್ನೆ (ನ.17 ಶುಕ್ರವಾರ) ರಾತ್ರಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಪಕ್ಷ ನಾಯಕನಾಗಿ ಆರ್ ಅಶೋಕನ್ನು ಆಯ್ಕೆ ಮಾಡಲಾಗಿದೆ.

ಇನ್ನು ಶಾಸಕಾಂಗ ಸಭೆಗೆ ಕೆಲವು ಕೆಲವು ಬಿಜೆಪಿ ನಾಯಕರು ಗೈರುಹಾಜರಾಗಿದ್ದರಿಂದ ಬಿಜೆಪಿಯಲ್ಲಿ ಅಸಮಾಧಾನ ಎದ್ದು ಕಾಣುತ್ತಿದೆ.

ಇನ್ನು ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೆ ಮುನಿಸಿಕೊಂಡು ತೆರಳಿದ್ದ ಶಾಸಕ ರಮೇಶ್​​ ಜಾರಕಿಹೊಳಿ ಇದೀಗ ಪಕ್ಷದ ರಾಜ್ಯ ಘಟದ ಅಧ್ಯಕ್ಷರ ನೇಮಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕಕ್ಕೆ ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರದ ವೀಕ್ಷಕರ ಎದುರು ತಮ್ಮ ಬೇಗುದಿ ತೋಡಿಕೊಂಡಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದರೆ ಒಪ್ಪುತ್ತಿದ್ದೆವು. ಆದರೆ, ನಮಗಿಂತ ಕಿರಿಯ‌ ವಯಸ್ಸಿನ ಬಿವೈ ವಿಜಯೇಂದ್ರ ಕೈ ಕೆಳಗೆ ಕೆಲಸ ಮಾಡೋದು ಹೇಗೆ? ರಾಜಾಧ್ಯಕ್ಷರ ನೇಮಕ ವಿಚಾರದಲ್ಲಿ ಇತರ ಹಿರಿಯರನ್ನ ಪರಿಗಣಿಸಬೇಕಿತ್ತು ಎಂದು ರಮೇಶ್ ಜಾರಕಿಹೊಳಿ ನೇರವಾಗಿ ವೀಕ್ಷಕರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

 

Related