ಬಿಎಸ್‌ವೈ ಆಪ್ತ ಸಂತೋಷ್ ಆತ್ಮಹತ್ಯೆ ಯತ್ನ; ಸತ್ಯವೇನು?

ಬಿಎಸ್‌ವೈ ಆಪ್ತ ಸಂತೋಷ್ ಆತ್ಮಹತ್ಯೆ ಯತ್ನ; ಸತ್ಯವೇನು?

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಪ್ತ ಹಾಗೂ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಳೆದ ರಾತ್ರಿ ಸದಾಶಿವ ನಗರದ ಮನೆಯಲ್ಲಿಯೇ ಹೆಚ್ಚು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಕೂಡಲೇ ಅವರನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದ ಎನ್.ಆರ್ ಸಂತೋಷ್, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಿಎಂ ಯಡಿಯೂರಪ್ಪ ಬೆಳಿಗ್ಗೆಯೇ ರಾಮಯ್ಯ ಆಸ್ಪತ್ರೆಗೆ ತೆರಳಿ ಸಂತೋಷ್ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಅವರು, ಸಂತೋಷ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ. ನನ್ನ ಜತೆಗೂ ಮಾತನಾಡಿದ್ದಾನೆ, ನಾನು ಧೈರ್ಯ ಹೇಳಿದ್ದೇನೆ ಎಂದು ತಿಳಿಸಿದರು.

ರಾಜೀನಾಮೆಗೆ ಸೂಚಿಸಿದ್ದೇ ಕಾರಣವಾಯ್ತಾ..?
ಕಳೆದ ಮೇ.2೮ರಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಎನ್.ಆರ್ ಸಂತೋಷ್‌ಗೆ ಇತ್ತೀಚೆಗೆ ಒತ್ತಡ ಹೆಚ್ಚಾಗಿತ್ತು ಎನ್ನಲಾಗಿದೆ. ಯಡಿಯೂರಪ್ಪ ಅವರ ಆಗುಹೋಗುಗಳನ್ನು ಸಂಪೂರ್ಣವಾಗಿ ಬಲ್ಲವರಾಗಿದ್ದ ಸಂತೋಷ್‌ಗೆ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಕೊಡುವಂತೆ ಒತ್ತಡ ಹೆಚ್ಚಾಗಿತ್ತು ಎಂಬ ವದಂತಿಗಳು ಹರಿದಾಡುತ್ತಿವೆ.

ಅಸಲಿ ಕಾರಣವೇನು ಗೊತ್ತಾ.?
ಆತ್ಮಹತ್ಯೆ ಯತ್ನದ ಹಿಂದೆ ಅನೇಕರ ಕಾರಣಗಳು ಕೇಳಿ ಬಂದಿದ್ದರೂ, ಆ ಒಂದು ಕಾರಣವೇ, ಅವರ ಆತ್ಮಹತ್ಯೆ ಯತ್ನಕ್ಕೆ ಬಲವಾದ ಕಾರಣವೆಂಬುದಾಗಿ ಅವರನ್ನು ಬಲ್ಲ ಮೂಲಗಳಿಂದ ಕೇಳಿ ಬರುತ್ತಿದೆ.

ಮಾನಸಿಕ ಖಿನ್ನತೆಗೊಳಗಾಗಿದ್ದ ಸಂತೋಷ್
ಇದೇ ಕಾರಣದಿಂದಾಗಿ ಕೆಲ ದಿನಗಳ ಕಾಲ ಸಂತೋಷ್ ಮಾನಸಿಕ ಖಿನ್ನತೆಗೂ ಒಳಗಾಗಿದ್ದರು ಎನ್ನಲಾಗಿದೆ. ಇದು ಒಂದು ಅವರ ಆತ್ಮಹತ್ಯೆ ಯತ್ನಕ್ಕೆ ಕಾರಣವಾಗಿದ್ದರೇ, ಮತ್ತೊಂದು ಸಿಎಂ ಯಡಿಯೂರಪ್ಪ ಜೊತೆಗಿನ ಒಡನಾಟದಲ್ಲಿ ಬಿರುಕು ಬಿಟ್ಟಿದ್ದು ಮತ್ತೊಂದು ಚಿಂತೆಗೂ ಅವರನ್ನು ದೂಡುವಂತೆ ಮಾಡಿತ್ತಂತೆ. ಇದೆಲ್ಲದರ ನಡುವೆ ಅರಸೀಕೆರೆ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರನ್ನಾಗಿ ಸಂತೋಷ್ ಜೊತೆಗೆ ಗುರ್ತಿಸಿಕೊಂಡಿದ್ದAತ ಎನ್.ಡಿ.ಪ್ರಸಾದ್ ಹೆಸರನ್ನು ಶಿಫಾರಸ್ಸು ಮಾಡಿ, ಅಧಿಕಾರದ ಗದ್ದುಗೆಗೆ ಏರಿಸಿದ್ದರು. ಈ ಮೂಲಕವು ಅಧ್ಯಕ್ಷಗಾಧೆಯ ರೇಸ್‌ನಲ್ಲಿದ್ದ ಜಿಬಿಟಿ ಬಸವರಾಜ್ ಅವರೊಂದಿಗೆ ವಿರೋಧ ಕಟ್ಟಿಕೊಂಡಿದ್ದರು. ಇದೇ ವಿಚಾರವಾಗಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಗೂ ಸಂತೋಷ್ ವಿರುದ್ಧ ಬಿಜಿಟಿ ಬಸವರಾಜ್ ತಂಡ ದೂರು ನೀಡಿತ್ತು. ಇದಲ್ಲದೆ ಪಕ್ಷದ ಕೆಲವು ಆಂತರಿಕ ಗೌಪ್ಯ ಮಾಹಿತಿಗಳನ್ನು ಜೆಡಿಎಸ್ ವಲಯಕ್ಕೆ ಸಂತೋಷ್ ರವಾನಿಸುತ್ತಿದ್ದರು ಎಂಬ ಗಂಭೀರ ಆರೋಪವನ್ನು ಕೂಡ ಬಸವರಾಜ್ ಮಾಡಿದ್ದರು .

ಪತ್ನಿಗೆ ಕಿರುಕುಳ
೨ ವರ್ಷಗಳ ಹಿಂದೆ ಅರಸೀಕೆರೆಯ ಜಾಹ್ನವಿ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದ ಸಂತೋಷ್ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಮುಖ್ಯಮಂತ್ರಿ ನಿವಾಸ ದವಳಗಿರಿ ಸಮೀಪದಲ್ಲಿಯೇ ಪತ್ನಿ ಜೊತೆ ವಾಸವಿದ್ದರು.. ಮದುವೆಯಾದ ಆರು ತಿಂಗಳಲ್ಲಿಯೇ ಸಾಂಸಾರಿಕ ಕಲಹ ಉಂಟಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಈ ವಿಚಾರ ಬಿಜೆಪಿ ಪಕ್ಷದ ಅಂಗಳಕ್ಕೂ ಕೂಡ ತಲುಪಿ ೆ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸಂತೋಷ್‌ಗೆ ಬುದ್ದಿವಾದ ಹೇಳಿದ್ದರು ಅಲ್ಲದೆ ಸಾಂಸಾರಿಕ ಗದ್ದಲ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಬೆಂಗಳೂರಿನ ಸದಾಶಿವನಗರದಲ್ಲಿ ದೂರು ಕೂಡ ದಾಖಲಾಗಿತ್ತು.

ಎಫ್‌ಐಆರ್ ದಾಖಲು
ಆತ್ಮಹತ್ಯೆ ಯತ್ನ ಬೆನ್ನಲ್ಲೆ ಸಂತೋಷ್ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಯತ್ನಿಸಿದ ಆರೋಪದಡಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಏನು? ಯಾರು? ಎನ್ನುವುದರ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಸಂತೋಷ್ ಪತ್ನಿ ಜಾಹ್ನವಿ ಹೇಳಿಕೆ ಪಡೆದಿರುವ ಪೊಲೀಸರು ಸಂತೋಷ್ ಡಿಸ್ಚಾರ್ಜ್ ಆದ ಬಳಿಕ ಹೇಳಿಕೆ ಪಡೆಯಲಿದ್ದಾರೆ. ಈ ಹಿನ್ನೆಲೆ ಹುದ್ದೆ ಕೈತಪ್ಪುವ ಸಾಧ್ಯತೆಯೂ ಹೆಚ್ಚಾಗಿದೆ.

Related