ಬೊಮ್ಮಾಯಿ ನಡೆ ಕೇಂದ್ರದ ಕಡೆ

ಬೊಮ್ಮಾಯಿ ನಡೆ ಕೇಂದ್ರದ ಕಡೆ

ಬೆಂಗಳೂರು, ಸೆ. 7: ಈ ಬಾರಿಯ ಲೋಕಸಭೆ ಚುನಾವಣೆ ಹಿಂದಿನ ಚುನಾವಣೆಗಿಂತಲೂ ಚುರುಕಿನ ಸ್ಪರ್ಧೆ ಏರ್ಪಡುವ ಸಾಧ್ಯತೆ ಹೆಚ್ಚಾಗಿದ್ದು, ಬೊಮ್ಮಾಯಿ ಅವರು ತವರು ಜಿಲ್ಲೆ ಹಾವೇರಿಯಿಂದ ಸ್ರ್ಪಧಿಸಲು ದೆಹಲಿ ಬಿಜೆಪಿ ನಾಯಕರು ಸೂಚನೆ ಕೊಟ್ಟಿದ್ದು, ಕೆಲ ದಿನಗಳ ಹಿಂದೆ ರಾಷ್ಟ್ರ ರಾಜಧಾನಿಗೆ ತೆರಳಿದ್ದ ಮಾಜಿ ಸಿಎಂಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಕರ್ನಾಟಕದಿಂದ ಈ ಬಾರಿ ಕನಿಷ್ಠ ಪಕ್ಷ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲೇಬೇಕು. ಹೀಗಾಗಿ ತವರು ಜಿಲ್ಲೆಯಿಂದ ಕಣಕ್ಕಿಳಿಯಬೇಕಾಗುತ್ತದೆ. ತಕ್ಷಣವೇ ಜಿಲ್ಲೆಯಲ್ಲಿ ಸಂಘಟನೆ ಮತ್ತು ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂಬ ಸಲಹೆಯನ್ನು ನೀಡಿದ್ದರು.

ಪ್ರಸ್ತುತ ಹಾವೇರಿಯ ಹಾಲಿ ಸಂಸದ ಶಿವಕುಮಾರ್ ಉದಾಸಿ ಅವರು ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿರುವುದರಿಂದ ಬಿಜೆಪಿ ಪ್ರಬಲ ನಾಯಕನನ್ನೇ ಕಣಕ್ಕಿಳಿಸುವ ಸಂಭವವಿದೆ. ಬೊಮ್ಮಾಯಿವರಿಗೆ ಟಿಕೆಟ್ ನೀಡಿದರೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ಪಕ್ಷದ ಗೆಲುವಿಗೆ ಶ್ರಮಿಸಬಹುದೆಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಾವೇರಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಬೊಮ್ಮಾಯಿ ಅವರು ಪ್ರತಿನಿಸುತ್ತಿದ್ದ ಶಿಗ್ಗಾವಿ-ಸವಣೂರು ಕ್ಷೇತ್ರವನ್ನು ಹೊರತುಪಡಿಸಿದರೆ ಉಳಿದ 7 ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ಆದರೂ ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿರುವುದರಿಂದ ಬೊಮ್ಮಾಯಿಯೇ ಸೂಕ್ತವಾದ ಅಭ್ಯರ್ಥಿ ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ.

Related