ಬಾಲಿವುಡ್ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ

ಬಾಲಿವುಡ್ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ

ಮುಂಬೈ: ಬಾಲಿವುಡ್‌ನ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ಇಂದು ನಸುಗಿನಲ್ಲಿ ವಿಧಿವಶರಾಗಿದ್ದಾರೆ.
ಉಸಿರಾಟದ ಸಮಸ್ಯೆಯಿಂದಾಗಿ ಬಳಲುತ್ತಿದ್ದ ಇವರನ್ನು ಮುಂಬೈನ ಬಾಂದ್ರಾದಲ್ಲಿನ ಗುರುನಾನಕ್ ಆಸ್ಪತ್ರೆಗೆ ಜೂನ್ 17ರಲ್ಲಿ ದಾಖಲಿಸಲಾಗಿತ್ತು. ಶುಕ್ರವಾರ ರಾತ್ರಿ 1.52ಕ್ಕೆ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ.

ಸುಮಾರು 2 ದಶಕಗಳಿಂದ ಬಾಲವುಡ್‌ನಲ್ಲಿ ತಮ್ಮ ಸಂಯೋಜನೆಯ ಮೂಲಕ ಮೋಡಿ ಮಾಡಿದ್ದ ಸರೋಜ್ ಅವರು, ಮಿ. ಇಂಡಿಯಾ ಸಿನಿಮಾದ ಹವಾ ಹವಾಯಿ, ಏಕ್ ದೋ ತೀನ್, ಧಕ್ ಧಕ್ ಕರ್ನೆ ಲಗಾ, ಡೋಲಾ ರೆ ಡೋಲಾ ಸೇರಿದಂತೆ ಸುಮಾರು 2000 ಸಿನಿಮಾಗಳಿಗೆ ನೃತ್ಯ ಸಂಯೋಜಿಸಿ ಖ್ಯಾತಿ ಗಳಿಸಿದ್ದರು.

Related