ರಕ್ತದಾನ ಶಿಬಿರ

ರಕ್ತದಾನ  ಶಿಬಿರ

ಪೀಣ್ಯ ದಾಸರಹಳ್ಳಿ : ರೋಗಿಗಳ ಸೇವೆ ಅಲ್ಲದೆ ಸದಾ ಸಮಾಜಸೇವೆಯಲ್ಲಿ ತೊಡಗಿರುವ ಡಾಕ್ಟರ್ ನಾಗೇಶ ರವರು ಹೆಗ್ಗನಹಳ್ಳಿ ವಾರ್ಡಿನಲ್ಲಿ ಭಾರಿ ಜನಪ್ರಿಯತೆ ಪಡೆದವರ. ಕಷ್ಟ-ಸುಖಕ್ಕೆ ಸ್ಪಂದಿಸುತ್ತಿರುವರು ಎಂದು ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಎಸ್ ಮುನಿರಾಜು ತಿಳಿಸಿದರು.
ಶನಿವಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಎಸ್ ಮುನಿರಾಜು ಕೊರೋನಾ ಸಮಯದಲ್ಲಿ ಆಶಾ ಕಾರ್ಯಕರ್ತರಿಗೆ , ವಾರಿಯರ್ಸ್ ,ಪೌರಕಾರ್ಮಿಕರಿಗೆ ಉಡುಗೊರೆ ನೀಡುವುದು, ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಡಾಕ್ಟರ್ ನಾಗೇಶ್ ಕುಮಾರ್ ಮಾತನಾಡಿ ಜೈ ಮಾರುತಿ ಯುವಕರ ಸಂಘದ ಕಾರ್ಯಕರ್ತರು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುವುದು ಸಂತೋಷ ತಂದಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಕೊರೋನಾಗೆ ಒಳಗಾದ ವ್ಯಕ್ತಿಗಳಿಗೆ ರಕ್ತದ ಅಭಾವ ಆಗಬಾರದೆಂದು ಜೈ ಮಾರುತಿ ಕನ್ನಡ ಯುವಕರ ಸಂಘ ಸದಸ್ಯರು ರಕ್ತದಾನ ಶಿಬಿರವನ್ನು ಆಯೋಜಿಸಿದ್ದಾರೆ ಇದು ಉತ್ತಮ ಒಳ್ಳೆಯ ಕೆಲಸ ಎಂದರು. ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಬಹುದು, ನಮ್ಮ ದೇಹಕ್ಕೆ ಹೊಸದಾಗಿ ರಕ್ತ ಉತ್ಪತ್ತಿ ಆಗುತ್ತದೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗಂಗರಾಜು, ಎಚ್ ಜಿ ಸುರೇಶ್, ಕಣ್ಣಪ್ಪ, ಬಿಜೆಪಿ ರಾಮು, ವೆಂಕಟೇಶ್, ಬಾರ್ ಗಂಗಣ್ಣ, ಮಂಜುನಾಥ್, ಬಸವರಾಜ್, ಕೆಸಿ ರವಿ, ಶಿವಲಿಂಗಯ್ಯ, ಮುನಿರಾಜು, ಪುಟ್ಟಸ್ವಾಮಿ ಮುಖಂಡರು ಇದ್ದರು.

Related