CEOಗಳಿಗೆ CM ಬೊಮ್ಮಾಯಿ ಎಚ್ಚರಿಕೆ

ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದ್ರೆ ಮಾತ್ರ ನಮ್ಮ ಕಲ್ಪನೆಯ ನವ ಕರ್ನಾಟಕ ನಿರ್ಮಾಣ ಆಗಲು ಸಾಧ್ಯ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.

ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಜಿಲ್ಲಾ ಪಂಚಾಯತ್ ಸಿಇಓಗಳ ಜತೆ ಸಭೆ ನಡೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಸಿಇಓಗಳೇ ಗ್ರಾಮಕ್ಕೆ ಭೇಟಿ ನೀಡುತ್ತಿಲ್ಲ. ಮೊದಲು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಇಲ್ಲಾವಾದ್ರೆ ಪಿಡಿಓಗಳೇ(PDO Panchayat Development Officer) ಹೆದರಲ್ಲ. ಕೆಳ ಹಂತದ ಅಧಿಕಾರಿಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ ಮತ್ತು ಅಧಿಕಾರದ ವಿಕೇಂದ್ರಿಕರಣ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇದರಲ್ಲಿ ಎಷ್ಟು ಜನ ಗ್ರಾಮಗಳಿಗೆ ಭೇಟಿ ನೀಡಿದ್ದೀರಿ? ಎಷ್ಟು ಜನ ಫಲಾನುಭವಿಗಳ ಪಟ್ಟಿ ಆಯ್ಕೆ ಮಾಡಿದ್ದೀರಿ  ಎಂದು ಸಾಲು ಸಾಲು ಪ್ರಶ್ನೆ ಮಾಡಿದರು.

 

ನಾಲ್ಕು ತಿಂಗಳಲ್ಲಿ ಪೂರ್ಣವಾಗುವ ಕೆಲಸವನ್ನು 12 ತಿಂಗಳವರೆಗೆ ಎಳೆಯುತ್ತೀರಿ. ಇಂದಿನಿಂದ ನಿಮ್ಮ ಕಾರ್ಯವೈಖರಿ ಬದಲಾಗಬೇಕು . ಜನರಿಗೆ ನಿಮ್ಮ ಮೇಲೆ ವಿಶ್ವಾಸ ಬರುವಂತೆ ಕೆಲಸ ಮಾಡಿ ಎಂದು ಜಿಲ್ಲಾ ಪಂಚಾಯತ್ ಸಿಇಓಗಳಿಗೆ ಎಚ್ಚರಿಕೆ ರವಾನಿಸಿದರು.

ನಿಮ್ಮ ಕೆಲಸ ಯೋಜನ ಬದ್ಧವಾಗಿ ನಡೆಯಬೇಕು. ನಿಮ್ಮನ್ನು ಹೇಳೋರು ಕೇಳೋರು ಯಾರು ಇಲ್ಲ ಅಂತ ತಿಳಿದುಕೊಳ್ಳಬೇಡಿ. ನನ್ನ ಕಾರ್ಯವೈಖರಿಯೇ ಬೇರೆ. ಎಲ್ಲವನ್ನು ನಾನು ಗಮನಿಸುತ್ತಿರುತ್ತೇನೆ. ಶಾಲಾ ಮಕ್ಕಳಿಗೆ ಲಸಿಕೆ ನೀಡಬೇಕು ಎಂದು ಸೂಚನೆ ನೀಡಲಾಗಿತ್ತು. ಒಂದು ಜಿಲ್ಲೆಯಲ್ಲಿ ಸುಮಾರು 3 ಲಕ್ಷದಷ್ಟು ಮಕ್ಕಳಿವೆ. ಈ ವಿಷಯವನ್ನು ಯಾರು ಗಂಭೀರವಾಗಿ ತೆಗೆದುಕೊಂಡಿದ್ದೀರಿ. ಒಂದು ವೇಳೆ ಮಕ್ಕಳಿಗೆ ಏನಾದ್ರೂ ಆದ್ರೆ ಯಾರು ಜವಾಬ್ದಾರಿ ಎಂದು ಎಲ್ಲರನ್ನು ತರಾಟೆಗೆ ತೆಗೆದುಕೊಂಡರು.

Related