ಸಚಿವ ಸಂಪುಟ ಸಭೆ ಕರೆದ ಮುಖ್ಯಮಂತ್ರಿಗಳು

ಸಚಿವ ಸಂಪುಟ ಸಭೆ ಕರೆದ ಮುಖ್ಯಮಂತ್ರಿಗಳು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಇಂದು ದಿಢೀರ್​ ಸಚಿವ ಸಂಪುಟ ಸಭೆ ಕರೆದಿದ್ದು, ರಾಜ್ಯದ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಮಹತ್ವದ ಕಾರ್ಯಕ್ರಮಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆಯಿದೆ. ರೈತರಿಗೆ ಇಂಧನ ವೆಚ್ಚ ಕಡಿತಕ್ಕೆ ರೈತಶಕ್ತಿ ಯೋಜನೆ ಅಡಿಯಲ್ಲಿ ಪ್ರತಿ ಎಕರೆಗೆ 250 ರೂಪಾಯಿನಂತೆ ಡಿಸೇಲ್​ಗೆ ಸಹಾಯಧನ ನೀಡುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಮೈಸೂರಿನ ಕೆ.ಆರ್ ರಸ್ತೆ ಬಳಿಯಿರುವ ದೇಗುಲ ಧೀರ್ಘಾವದಿಗೆ ಗುತ್ತಿಗೆ ನೀಡುವ ಕುರಿತು, ಮಂಡ್ಯದಲ್ಲಿ ಶ್ರೀರಂಗಪಟ್ಟದ ಮಹದೇವಪುರ ಬಳಿಯ ಗೋಮಾಳವನ್ನು ಬೆಂಗಳೂರಿನ ಇಸ್ಕಾನ್ ಸಂಸ್ಥೆಗೆ ನೀಡುವ ಬಗ್ಗೆ, ಬಸವನಗುಡಿ ಕಾರಂಜಿ ಆಂಜನೇಯ ದೇಗುಲದಲ್ಲಿ ಕಲ್ಯಾಣ ಮಂಟಪ, ಶೃಂಗೇರಿ ಶಾರದಾ ಪೀಠಕ್ಕೆ ನಿರ್ಮಾಣದ ಹೊಣೆಗಾರಿಕೆ, ಅಪೂರ್ಣ ಉಗ್ರಾಣಗಳ ಪೂರ್ಣಕ್ಕೆ ಅನುದಾನ ಸೇರಿದಂತೆ 962 ಕೋಟಿ ರೂಪಾಯಿಗಳ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ನೀಡುವ ಸಂಭವಿದೆ.

Related