ಖರ್ಗೆಗೆ ಭರ್ಜರಿ ಗೆಲುವು

ಖರ್ಗೆಗೆ ಭರ್ಜರಿ ಗೆಲುವು

ನವದೆಹಲಿ: 24 ವರ್ಷದ ಬಳಿಕ ಗಾಂಧಿಯೇತರ ವ್ಯಕ್ತಿ ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಪಕ್ಷದ ಸಾರಥಿಯಾಗಿದ್ದಾರೆ.

ರಾಜ್ಯಸಭೆಯ ಪ್ರತಿಪಕ್ಷದ ನಾಯಕನಾಗಿದ್ದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ (AICC) ಅಧ್ಯಕ್ಷರಾಗಿದ್ದಾರೆ. ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಹೊಸ ಅಧ್ಯಕ್ಷರ ಆಯ್ಕೆಗೆ ನಡೆದಿದ್ದು ಮಲ್ಲಿಕಾರ್ಜುನ ಖರ್ಗೆ ನೂತನ ಸಾರಥಿಯಾಗಿದ್ದಾರೆ.

ಎಐಸಿಸಿ ಅಧ್ಯಕೀಯ ಚುನಾವಣೆಯಲ್ಲಿ ಒಟ್ಟು 9,385 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ 415 ಮತಗಳನ್ನು ಅಮಾನ್ಯಗೊಳಿಸಲಾಗಿತ್ತು. ಈ ಪೈಕಿ 7,897 ಮತಗಳನ್ನು ಪಡೆದ ಮಲ್ಲಿಕಾರ್ಜುನ ಖರ್ಗೆ ಜಯಭೇರಿ ಭಾರಿಸಿದ್ದಾರೆ. ಪ್ರತಿಸ್ಪರ್ಧಿಯಾಗಿದ್ದ ಶಶಿ ತರೂರ್‌ 1,072 ಮತಗಳನ್ನು ಪಡೆದು ಸೋಲನ್ನು ಅನುಭವಿಸಿ ತೀವ್ರ ಮುಖಭಂಗಕ್ಕೀಡಾಗಿದ್ದಾರೆ.

6ನೇ ಬಾರಿಗೆ ಚುನಾವಣೆ:

137 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಪಕ್ಷ, ಸ್ವಾತಂತ್ರ್ಯ ನಂತರ ಅಧ್ಯಕ್ಷರ ಆಯ್ಕೆಗೆ 6ನೇ ಬಾರಿ ಚುನಾವಣೆ ಕಂಡಿದೆ. 1939, 1950, 1977, 1997, 2000 ಮತ್ತು 2022 ಈ ಅವಧಿ ಚುನಾವಣೆ ನಡೆದಿದೆ. ಉಳಿದಂತೆ ಬಹುತೇಕ ಸಂದರ್ಭ ಗಾಂಧಿ ಕುಟುಂಬದ ವ್ಯಕ್ತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 2000ದಲ್ಲಿ ನಡೆದಿದ್ದ ಅಧ್ಯಕ್ಷರ ಚುನಾವಣೆಯಲ್ಲಿ ಸೋನಿಯಾ ಗಾಂಧಿ, ಎದುರಾಳಿ ಜಿತೇಂದ್ರ ಪ್ರಸಾದ್‌ ವಿರುದ್ಧ ಭಾರಿ ಅಂತರದಿಂದ ಗೆದ್ದು ಆಯ್ಕೆಯಾಗಿದ್ದರು.

 

Related