ಬಿಬಿಎಂಪಿ ಕ್ಯೂಆರ್ ಕೋಡ್ ಸ್ಕ್ಯಾನರ್:  ನಿಮ್ಮ ಏರಿಯಾ ಸಮಸ್ಯೆಗೆ ಅಂಗೈಯಲ್ಲಿದೆ ಮದ್ದು!

ಬಿಬಿಎಂಪಿ ಕ್ಯೂಆರ್ ಕೋಡ್ ಸ್ಕ್ಯಾನರ್:  ನಿಮ್ಮ ಏರಿಯಾ ಸಮಸ್ಯೆಗೆ ಅಂಗೈಯಲ್ಲಿದೆ ಮದ್ದು!

ಬೆಂಗಳೂರು: ಬೆಂಗಳೂರು ನಗರ ವಾಸಿಗಳಿಗಾಗಿ ಬಿಬಿಎಂಪಿ ಕ್ಯೂಆರ್ ಕೋಡ್ ಸ್ಕ್ಯಾನರ್ ಪರಿಚಯಿಸಿದೆ ಸಾರ್ವಜನಿಕ ಸಂಸ್ಥೆಗಳ ಅಧಿಕಾರಿಗಳನ್ನು ಒಂದೇ ವೇದಿಕೆ ಮೂಲಕ ಸಂಪರ್ಕಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  ದಕ್ಷಿಣ ವಲಯದ ಬೀದಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ಗಳನ್ನು ಅಂಟಿಸಲಾಗುತ್ತಿದೆ.

ಈ ಮೂಲಕ ನಾಗರಿಕ ಸೇವಾ ಸಂಸ್ಥೆ ಅಧಿಕಾರಿಗಳನ್ನು ತಲುಪಲು ಒಂದು ಉತ್ತಮ ವೇದಿಕೆಯಾಗಿದೆ. ಇದು ಜನರ ಮತ್ತು ಸರ್ಕಾರಿ ಅಧಿಕಾರಿಗಳ ಅಂತರವನ್ನು ಕಡಿಮೆ ಮಾಡುತ್ತದೆ. ತಿಂಗಳ ಹಿಂದೆ ಆರಂಭವಾದ ಈ ಯೋಜನೆಗೆ ಇಲ್ಲಿಯವರೆಗೆ ಸುಮಾರು 15 ಲಕ್ಷ ರೂ ಖರ್ಚಾಗಿದೆ.

ಬಿಬಿಎಂಪಿ ದಕ್ಷಿಣ ವಲಯದ ಆಯುಕ್ತ ಜಯರಾಮ ರಾಯಪುರ ಅವರು ಮಾತನಾಡಿ, ವಲಯದಲ್ಲಿ 10,500 ಬೀದಿಗಳಿದ್ದು, ಈಗಾಗಲೇ 7,500 ಕ್ಯೂಆರ್ ಕೋಡ್ಗಳನ್ನು ರಸ್ತೆ ಫಲಕಗಳಲ್ಲಿ ಅಂಟಿಸಲಾಗಿದೆ. ದಕ್ಷಿಣ ವಲಯವು ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಅವು ಬಿಟಿಎಂ ಲೇಔಟ್, ಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ ಮತ್ತು ವಿಜಯನಗರ.

ಏತನ್ಮಧ್ಯೆ, ಬೆಂಗಳೂರಿನ ಎಲ್ಲಾ ಬಿಬಿಎಂಪಿ ವಲಯಗಳ 13,000 ಕಿಮೀ ರಸ್ತೆಗಳಿಗ ಜಾಲವನ್ನು ಕವರ್ ಮಾಡಲು 55,000 ಕ್ಕೂ ಹೆಚ್ಚು ಕ್ಯೂಆರ್ ಕೋಡ್ ಸ್ಕ್ಯಾನರ್ಗಳ ಅಗತ್ಯವಿದೆ.

ಇದರ ವೆಚ್ಚ 1 ಕೋಟಿ ರೂ. ಇತರ ವಲಯಗಳಲ್ಲಿ ಉಪಕ್ರಮವನ್ನು ಕಾರ್ಯಗತಗೊಳಿಸಲು ಬಿಬಿಎಂಪಿ ಶೀಘ್ರದಲ್ಲೇ ಟೆಂಡರ್ಗಳನ್ನು ಕರೆಯಲಿದೆ. ಎಂಜಿನಿಯರ್ಗಳು, ಘನತ್ಯಾಜ್ಯ ನಿರ್ವಹಣಾ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಜೊತೆಗೆ ನಿರ್ದಿಷ್ಟ ರಸ್ತೆಗಳ ಮಾಹಿತಿಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.

ವರದಿ

ಎಲ್.ಮಂಜುನಾಥ

Related