BBMP Election: 10 ಕೋಟಿ ವೆಚ್ಚದಲ್ಲಿ ಹೊಸ ಕೌನ್ಸಿಲ್ ಹೌಸ್ ನಿರ್ಮಾಣ

BBMP Election: 10 ಕೋಟಿ ವೆಚ್ಚದಲ್ಲಿ ಹೊಸ ಕೌನ್ಸಿಲ್ ಹೌಸ್ ನಿರ್ಮಾಣ

ಚುನಾವಣೆಗೂ ಮುನ್ನವೇ ಬಿಬಿಎಂಪಿ ಹೊಸ ಕೌನ್ಸಿಲ್ ಹೌಸ್ ನಿರ್ಮಾಣಕ್ಕೆ ಮುಂದಾಗಿದ್ದು, ಹೊಸ ಕಾಯ್ದೆ ಪ್ರಕಾರ 198 ರಿಂದ 243ಕ್ಕೆ ಏರಿದ ಕಾರ್ಪೋರೇಟರ್ಸ್ ಗಳಿಗೆ ತಕ್ಕಂತೆ ಹೊಸ ಕೌನ್ಸಿಲ್ ಹೌಸ್ ನಿರ್ಮಾಣ ಶುರುವಾಗಿದೆ.

ಬೆಂಗಳೂರು (ಮೇ.25) :  ಬಿಬಿಎಂಪಿ ಚುನಾವಣೆಗೆ (BBMP Election) ಸುಪ್ರಿಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ವಾತಾವರಣ ಗರಿಗೆದರಿದೆ. ಹೊಸ ಕಾಯ್ದೆ ಪ್ರಕಾರ 198 ರಿಂದ 243ಕ್ಕೆ ಏರಿದ ಕಾರ್ಪೋರೇಟರ್ಸ್ ಗಳಿಗೆ ತಕ್ಕಂತೆ ಹೊಸ ಕೌನ್ಸಿಲ್ ಹೌಸ್ ನಿರ್ಮಾಣ ಶುರುವಾಗಿದೆ.

ಕೆಂಪೇಗೌಡ ಪೌರ ಸಭಾಂಗಣಕ್ಕೆ ಹೈಟೆಕ್ ಟಚ್ ಕೊಡಲು ಬಿಬಿಎಂಪಿ (BBMP) ಆರಂಭಿಸಿದೆ. ಕಳೆದ ಬಾರಿ 198 ವಾರ್ಡ್ ಇದ್ದ ಬಿಬಿಎಂಪಿ ,ಈ ಬಾರಿ 243 ವಾರ್ಡ್ ಆಗಿ ಹೆಚ್ಚಳವಾಗಿದೆ.  ಕೌನ್ಸಿಲ್ ಕಟ್ಟಡಕ್ಕೆ ಹೊಸ ಬ್ಲೂ ಪ್ರಿಂಟ್  ಸಿದ್ದಪಡಿಸಿರುವ ಪಾಲಿಕೆ, 10 ಕೋಟಿ ರೂ. ವೆಚ್ಚದಲ್ಲಿ ಪಾಲಿಕೆ ಕೌನ್ಸಿಲ್ ಕಟ್ಟಡ ಮರು ವಿನ್ಯಾಸ ಆಗುತ್ತಿದೆ.

ಪ್ರತಿ ಸದಸ್ಯರ ಆಸನದಲ್ಲಿ ಮೈಕ್ ಅಳವಡಿಕೆ ಜೊತೆಗೆ ಇಡೀ ಸಭಾಂಗಣಕ್ಕೆ ಸೌಂಡ್ ಪ್ರೂಫ್ ಅಕೌಸ್ಟಿಕ್ಸ್ ಅಳವಡಿಸಲಾಗುತ್ತಿದೆ. ಕೌನ್ಸಿಲ್ ಹೌಸ್ ನಲ್ಲಿ ಸಿಸಿ ಕ್ಯಾಮಾರ ಕೂಡ ಅಳವಡಿಕೆಯಾಗಲಿದೆ. ಕೌನ್ಸಿಲ್ ಸಭೆ ವೀಕ್ಷಿಸಲು ಸಾರ್ವಜನಿಕರಿಗೆ ಹಾಗೂ ಮಾಧ್ಯಮದವರಿಗೆ ಪ್ರತ್ಯೇಕ ಅಸನದ ವ್ಯವಸ್ಥೆ ಆಗುತ್ತಿದೆ.
ಕೌನ್ಸಿಲ್ ಬಿಲ್ಡಿಂಗ್ ಅನ್ನು 243 ಕಾರ್ಪೋರೇಟರ್ಸ್ ಗೆ ತಕ್ಕಂತೆ ನವೀಕರಿಸುತ್ತಿದ್ದೇವೆ. ಇದಕ್ಕೆ ಕೆಲವರ ವಿರೋಧ ಇದೆ. ಅವ್ರು ಇನ್ನು ಭವ್ಯವಾಗಿ ಕಟ್ಟಬೇಕು ಅಂತಿದ್ದಾರೆ.  ಅವ್ರು ಕಟ್ಟಿಕೊಳ್ಳಲಿ, ಸಧ್ಯಕ್ಕೆ ನಾವು 243 ಜನಕ್ಕೆ ಬೇಕಾದ ವ್ಯವಸ್ಥೆ ಅಷ್ಟೇ ರಿನೋವೆಷನ್ ಮಾಡುತ್ತೇವೆ ಎಂದು ಬಿಬಿಎಂಪಿಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

Related