ಬಾಬು ಜಗಜೀವನ ರಾಮ್‌ ರವರ 37ನೇ ಪುಣ್ಯಸ್ಮರಣೆ

ಬಾಬು ಜಗಜೀವನ ರಾಮ್‌ ರವರ 37ನೇ ಪುಣ್ಯಸ್ಮರಣೆ

ಬೆಂಗಳೂರು: ನಗರದ ಟಿಸಿ ಪಾಳ್ಯಾದ, ಶುಭಾಷ್‌ ನಗರದಲ್ಲಿರುವ ಶ್ರೀ ಇನ್ಸ್ಟಿಟ್ಯೂಟ್‌ಆಫ್‌ ಟೆಕ್ನಾಲಜಿ , ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದಲ್ಲಿ ಮಾಜಿ ಉಪ ಪ್ರದಾನಿ ಡಾ.ಬಾಬು ಜಗಜೀವನ ರಾಮ್‌ ರವರ 37ನೇ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು.

ಇನ್ಸ್ಟಿಟ್ಯೂಟ್‌ಆಫ್‌ ಟೆಕ್ನಾಲಜಿ ಸಂಸ್ಥೆಯಲ್ಲಿ ಮಾಧ್ಯಮ ತರಬೇತಿ ಪಡೆಯುತ್ತಿರುವಂತಹ ವಿದ್ಯಾರ್ಥಿಗಳಿಗೆ ತರಬೇತಿ ಕೇಂದ್ರದ ಸಂಸ್ಥಾಪಕರಾದ ನಕೀರೆಕಂಟಿ ಸ್ವಾಮಿ ಅವರು, ಮಾಜಿ ಉಪ ಪ್ರದಾನಿ ಹಸಿರು ಕ್ರಾಂತಿ ಹರಿಕಾರರಾದ ಡಾ: ಬಾಬು ಜಗಜೀವನ ರಾಮ್‌ ರವರ ಪುಣ್ಯಸ್ಮರಣೆಯ ಅಂಗವಾಗಿ  ಅವರ ಭಾವ ಚಿತ್ರಕ್ಕೆ ಹೂಮಾಲೆ ಹಾಕಿ ಗೌರವ ಸೂಚಿಸಿದರು.

ನಂತರ ಮಾತನಾಡಿದ ಅವರು, ಜಗಜೀವನ ರಾಮ್‌ ರವರು ಸ್ವತಂತ್ರ ಹೋರಾಟಗಾರರಾಗಿದ್ದರು, ತುಳಿತಕ್ಕೊಳಗಾದ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದವರು ಅವರ ಸಾದನೆಗಳು ಅಪಾರವಾಗಿವೆ, ಮತ್ತು ಅವರು ಈ ದೇಶದ ಉಪ ಪ್ರದಾನಿಗಾಗಿದ್ದ ಸಂಧರ್ಭದಲ್ಲಿ ಕೃಷಿ ಕ್ಷೇತ್ರಕ್ಕೆ ಅವರ ಕೊಡುಗೆ ಮಹತ್ತರವಾಗಿವೆ ಅವರು ಹಸಿರು ಕ್ರಾಂತಿ ಹರಿಕಾರರೆಂದು ಹೆಸರು ಪಡೆದವರಾಗಿದ್ದಾರೆ.

ನೀವು ಸಹ ಅವರಂತೆ ಅವರ ಹಾಗೆ ಜೀವನದಲ್ಲಿ ಏನನ್ನಾದರೂ ಸಾದನೆ ಮಾಡಬೇಕೆನ್ನುವ ಛಲ ನಿಮ್ಮಲ್ಲಿ ಬರಬೇಕು, ಈ ಮಾದ್ಯಮ ತರಬೇತಿಯನ್ನು ಪಡೆದು ಸಮಾಜಕ್ಕೆ ಅತ್ಯುತ್ತಮ ವರದಿಗಾರರಾಗಿ ಹೊರಹೊಮ್ಮಿ ಒಳ್ಳೆ ಹೆಸರುಗಳಿಸಿಕೊಂಡು ಸಾದಕರಾಗಿ, ಜೀವನದಲ್ಲಿ ಆರ್ಥಿಕವಾಗಿ ಸಭಲರಾಗಿ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ಬೆಳೆಯಿರಿ ಎಂದು ಶಿಭಿರಾರ್ಥಿಗಳಿಗೆ ಕಿವಮಾತುಗಳನ್ನು ಹೇಳಿದರು.

ಈ ಸಂಧರ್ಭದಲ್ಲಿ ಎಚ್ ಆರ್ ಮ್ಯಾನೇಜರ್, ನೂರ್ ಜಹಾನ್, ಶಿಕ್ಷಕರಾದ ರಮೇಶ್ ಬಾಬು, ಚಂದನ ಎಂ, ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು

ವರದಿ

ಎಲ್.ಮಂಜುನಾಥ(ಮರಿಯಮ್ಮನಹಳ್ಳಿ)

 

 

 

 

Related