ಅಯೋಧ್ಯ: 500 ವರ್ಷಗಳ ಹೋರಾಟದ ಪ್ರತಿಫಲ ಇಂದು ದೊರಕಿದೆ

ಅಯೋಧ್ಯ: 500 ವರ್ಷಗಳ ಹೋರಾಟದ ಪ್ರತಿಫಲ ಇಂದು ದೊರಕಿದೆ

ಹಲವಾರು ವರ್ಷಗಳ ಸತತ ಹೋರಾಟದಿಂದ ಅಯೋಧ್ಯೆಯಲ್ಲಿರುವ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಸಿಕ್ಕಿದ್ದು, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆಯನ್ನು ನೆರವೇರಿಸಲಾಗಿದೆ.

ಹೌದು ಇಡೀ ದೇಶದ ಹಿಂದೂ ಜನಾಂಗಕ್ಕೆ ಇಂದು ಬಹಳ ಸಡಗರ ಸಂಭ್ರಮ. ಅಯೋಧ್ಯೆಯಲ್ಲಿ ರಾಮಮಂದಿರ ಮೂರ್ತಿ ಪ್ರತಿಷ್ಠಾಪನೆಯಿಂದ ಬಹಳ ಸಂತೋಷ ಪಡುತ್ತಿದ್ದಾರೆ.

ಕೇವಲ ಅಯೋಧ್ಯೆಯಲ್ಲಿ ಮಾತ್ರವಲ್ಲದೆ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ಸಂತೋಷ ಮನೆ ಮಾಡಿದ್ದು, ಅಯೋಧ್ಯ ರಾಮ ಮಂದಿರ ಉದ್ಘಾಟನೆ ದಿನದಂದು ರಾಜ್ಯ, ರಾಜ್ಯಗಳಲ್ಲಿ ವಿವಿಧ ಸಂಗೀತ ಕಾರ್ಯಕ್ರಮ ಸೇರಿದಂತೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡುವ ಮೂಲಕ ರಾಮನನ್ನು ಪ್ರಾರ್ಥಿಸುತ್ತಿದ್ದಾರೆ.

ಇನ್ನು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಬರೊಬ್ಬರಿ 7 ಸಾವಿರ ಮಂದಿ ಗಣ್ಯರು ಆಗಮಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಗಣ್ಯರು ಅಯೋಧ್ಯೆ ತಲುಪಿದ್ದಾರೆ.

ಇಡೀ ಕಾರ್ಯಕ್ರಮಕ್ಕೆ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಇಂದು ಸೋಮವಾರ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಂತರು ಮತ್ತು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ನಡೆಯಲಿದೆ.

ಕ್ರಿಕೆಟ್ ಜಗತ್ತು, ಚಲನಚಿತ್ರ ಜಗತ್ತು, ಸಂತ ಸಮಾಜ, ರಾಜಕೀಯ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮತ್ತು ಇತರ ಕ್ಷೇತ್ರಗಳ ವಿಶೇಷ ಅತಿಥಿಗಳನ್ನು ಈ ಭವ್ಯ ಸಮಾರಂಭಕ್ಕೆ ಹಾಜರಾಗಲು ಆಹ್ವಾನಿಸಲಾಗಿದೆ.

ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ಬಿಗಿ ಭದ್ರತೆಯ ನಡುವೆ ಬಾಲರಾಮ ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭ ಮಧ್ಯಾಹ್ನ 12:30ಕ್ಕೆ ಆರಂಭವಾಗಲಿದೆ.

ಪ್ರಾಣ ಪ್ರತಿಷ್ಠಾ ಸಮಾರಂಭವು ‘ಮಂಗಲಧ್ವನಿ’ ಎಂಬ ಬೆರಗುಗೊಳಿಸುವ ಸಂಗೀತ ಕಾರ್ಯಕ್ರಮದ ಮೂಲಕ ಗುರುತಿಸಲ್ಪಡುತ್ತದೆ. ಪ್ರಪಂಚದಾದ್ಯಂತದ ಹಿಂದೂ ಸಮುದಾಯದ ಜನರು ಈ ಐತಿಹಾಸಿಕ ಸಂದರ್ಭಕ್ಕಾಗಿ ತಮ್ಮ ಅತೀವ ಉತ್ಸಾಹ ಮತ್ತು ಗೌರವವನ್ನು ಪ್ರದರ್ಶಿಸುವ ಭವ್ಯವಾದ ಆಚರಣೆಗಳಿಗೆ ಸಜ್ಜಾಗುತ್ತಿದ್ದಾರೆ.

 

Related