ಕೆ. ಶಿವರಾಂರವರ ಕನಸನ್ನು ಈಗಲಾದರೂ ನನಸು ಮಾಡಿ: ವಾಣಿ ಶಿವರಾಂ ಮನವಿ

ಕೆ. ಶಿವರಾಂರವರ ಕನಸನ್ನು ಈಗಲಾದರೂ ನನಸು ಮಾಡಿ: ವಾಣಿ ಶಿವರಾಂ ಮನವಿ

ಬೆಂಗಳೂರು:  ಜನಸೇವೆಯ ನಿರೀಕ್ಷೆಯಲ್ಲೇ ಕೊನೆಯುಸಿರೆಳೆದ ಕೆ. ಶಿವರಾಂರವರ ಕನಸ್ಸನ್ನು ಈಗಲಾದರೂ ನನಸು ಮಾಡುವ ನಿಟ್ಟಿನಲ್ಲಿ ಅವಕಾಶ ಕಲ್ಪಿಸಬೇಕೆಂದು ವಾಣಿ ಶಿವರಾಂ ರವರು ಮನವಿ ಮಾಡಿದರು.

ವಾಣಿ ಶಿವರಾಂರವರು ಹಾಗೂ ಛಲವಾದಿ ಮಹಾಸಭಾದ ಮುಖಂಡರು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿಕಡು ಬಡತನದಲ್ಲಿ ಹುಟ್ಟಿದರೂ ತಮ್ಮ ತಂದೆಯ ಆಶಯದಂತೆ ಜನಸೇವೆಯಲ್ಲಿ ತೊಡಗಿಸಿಕೊಂಡರು. ಅಕ್ಷರಶಃ ಸರ್ಕಾರಿ ಕೆಲಸ ದೇವರ ಕೆಲಸ ಎಂದು ನಂಬಿ ಬದುಕಿದವರು.ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ಅಧಿಕಾರ ಅವಧಿಯಲ್ಲಿ ಶಕ್ತಿ ಮೀರಿ ಜನರಿಗಾಗಿ ಕೆಲಸ ಮಾಡಿದರು. ನಿವೃತ್ತರಾದ ಬಳಿಕವೂ ಜನಸೇವೆಯ ಕುಡಿತದಿಂದ ರಾಜಕೀಯ ಪ್ರವೇಶ ಮಾಡಿದರು. ಯಡಿಯೂರಪ್ಪನವರನ್ನು ಬಹಳ ನಂಬಿದರು. ಪಕ್ಷದ ಸೂಚನೆಯಂತೆ ಚಾಮರಾಜನಗರ ಜಿಲ್ಲೆಯ ಸಾವಿರಾರು ಹಳ್ಳಿಗಳಿಗೆ ಭೇಟಿ ನೀಡಿ ಕೆಲಸ ಮಾಡಿದರು. ಅದಾಗ್ಯೂ ಅವರಿಗೆ ಪಕ್ಷದಿಂದ ಟಿಕೆಟ್ ನೀಡಲಿಲ್ಲ. ಅವರ ಕೊನೆಯ ಗಳಿಗೆಯನ್ನು ಚಾಮರಾಜನಗರದ ಜನರ ಜೊತೆಯಲ್ಲೇ ಕಳೆದರು. ಈಗಲಾದರು ಶಿವರಾಂ ರವರ ಕೊನೆಯ ಆಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಮುಂದಾಗಬೇಕು ಎಂದರು.

ಶ್ರೀ ಜಗದ್ಗುರು ಬಸವ ನಾಗೇಶ್ವರ ಶರಣರು ಮಾತನಾಡಿ ಬಹಳಷ್ಟು ಹೋರಾಟಗಳ ನಡುವೆ ಕೆ. ಶಿವರಾಂ ರವರು ನಮ್ಮ ಗುರುಪೀಠವನ್ನು ಸ್ಥಾಪಿಸಿದರು. ಬೆಳ್ಳಿಹಬ್ಬದ ಸಂಭ್ರಮ ಸಮೀಪಿಸುತ್ತಿರುವಾಗ ಅವರನ್ನು ಕಳೆದುಕೊಂಡಿದ್ದು ವಿಷಾದನೀಯ ಸಂಗತಿಯಾಗಿದೆ. ಕೆ. ಶಿವರಾಂರವರ ಕನಸ್ಸು ಅವರೊಂದಿಗೆ ಅಂತ್ಯವಾಗಬಾರದು ಎಂದು ಇಡೀ ರಾಜ್ಯದ ಸಮುದಾಯದ ಜನ ಹಾಗೂ ಛಲವಾದಿ ಮಹಾಸಭಾದ ಪದಾಧಿಕಾರಿಗಳು ನಿರ್ಧರಿಸಿ ವಾಣಿ ಶಿವರಾಂರವರನ್ನು ಒತ್ತಾಯಿಸಲಾಗಿ ಅವರು ತಮ್ಮ ಪತಿಯ ಕನಸನ್ನು ನನಸು ಮಾಡಲು ಮುಂದೆ ಬಂದಿದ್ದಾರೆ. ಚಾಮರಾಜನಗರದಲ್ಲಿ ಐದು ಲಕ್ಷ ಜನಸಂಖ್ಯೆಯಲ್ಲಿ ಛಲವಾದಿಗಳು ಸಮುದಾಯ ವಾಣಿ ಶಿವರಾಂ ರವರ ಜೊತೆಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಸೂಕ್ತ ರೀತಿಯಲ್ಲಿ ತಿರ್ಮಾನ ತೆಗೆದುಕೊಳ್ಳುತ್ತಾರೆ ಅನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗಂಡನನ್ನು ಕಳೆದುಕೊಂಡ ನೋವಿನಲ್ಲಿದ್ದ ಶ್ರೀಮತಿ ವಾಣಿ ಶಿವರಾಂರವರು ಛಲವಾದಿ ಮಹಾಸಭಾದ ಪದಾಧಿಕಾರಿಗಳು ಹಾಗೂ ಸಮುದಾಯದ ಜನರ ಒತ್ತಾಯಕ್ಕೆ ಮಣಿದು ಚುನಾವಣೆ ರಾಜಕಾರಣ ಬಂದಿದ್ದಾರೆ. ಈ ಕುರಿತು ಕಾಂಗ್ರೆಸ್ ಪಕ್ಷ ಅಧ್ಯಕ್ಷರಾದ ಡಿ.ಕೆ‌ ಶಿವಕುಮಾರ್ ಸೇರಿದಂತೆ ಹಲವಾರು ಪ್ರಮುಖ ಮುಂಡರ ಜೊತೆಗೆ ಮಾತುಕತೆ ನಡೆಸಲಾಗಿದೆ. ಸಕಾರಾತ್ಮಕವಾಗಿ ಸ್ಪಂದಿಸಿದ ಡಿ.ಕೆ. ಶಿವಕುಮಾರ್ ರವರು ಭರವಸೆಯನ್ನು ನೀಡಿದ್ದಾರೆ.. ಚಾಮರಾಜನಗರದಲ್ಲಿ ಅತಿಹೆಚ್ಚು ಮತ ಸಂಖ್ಯೆ ಇರುವುದು ನಮ್ಮ ಸಮುದಾಯದವರದೆ.
ಯಾವರೀತಿಯಲ್ಲಿ ಅಂಬರೀಷ್ ರವರು ಅಗಲಿದ ಬಳಿಕ ಸುಮಲತಾರವರು ಗೆದ್ದರೊ ಅದೇ ರೀತಿಯಲ್ಲಿ ವಾಣಿ ಶಿವರಾಂ ರನ್ನು ನಾವು ಗೆಲ್ಲಿಸುತ್ತೇವೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ವಾಣಿ ಶಿವರಾಂ ರವರಿಗೆ ಲೋಕಸಭಾ ಚುನಾವಣೆ ಟಿಕೆಟ್ ನೀಡಬೇಕು………ಮನವಿ ಮಾಡಿದರು.

 

Related