ಕೋಲಾರದಲ್ಲಿ ಕುಡಿದು ರಂಪಾಟ ಮಾಡಿದ್ದ ASI ಅಮಾನತ್ತು

  • In State
  • November 17, 2023
  • 79 Views
ಕೋಲಾರದಲ್ಲಿ ಕುಡಿದು ರಂಪಾಟ ಮಾಡಿದ್ದ ASI ಅಮಾನತ್ತು

ಕೋಲಾರ: ಗ್ರಾಮಾಂತರ ಪೊಲೀಸ್‌ ಠಾಣೆ ಎಎಸ್‌ಐ ಕುಡಿದ ಮತ್ತಿನಲ್ಲಿ ಬಾರ್‌ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ನವಂಬರ್ 11 ರಂದು ನಡೆದಿದ್ದು, ಕಾನೂನು ಪರಿಪಾಲನೆ ಮಾಡಬೇಕಾದ ಪೊಲೀಸಪ್ಪನಿಂದಲೇ ಗೂಂಡಾ ವರ್ತನೆಯಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಬಂಗಾರಪೇಟೆ ವೃತ್ತದಲ್ಲಿರುವ ಸಾಮ್ರಾಟ್‌ ಅಶೋಕ ಬಾರ್‌ ಬಳಿ ಕಳೆದ ಶನಿವಾರ ರಾತ್ರಿ ಘಟನೆ ನಡೆದಿದ್ದು, ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆ ಎಎಸ್‌ಐ ನಾರಾಯಣಸ್ವಾಮಿ ಕುಡಿದ ಮತ್ತಿನಲ್ಲಿ ಬಾರ್‌ ಸಿಬ್ಬಂದಿ ವಿರುದ್ಧ ಗಲಾಟೆ ಮಾಡಿದ್ದರು.

ಕಂಠಪೂರ್ತಿ ಕುಡಿದಿದ್ದ ಎಎಸ್‌ಐ ನಾರಾಯಣಸ್ವಾಮಿ ಬಾರ್‌ ಸಿಬ್ಬಂದಿ ನಮಸ್ಕಾರ ಹಾಕಿಲ್ಲಎಂಬ ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ ಬಾರ್‌ ಸಿಬ್ಬಂದಿ ಈ ರೀತಿ ಮಾತನಾಡಬೇಡಿ, ಮರ್ಯಾದೆಯಿಂದ ಮಾತನಾಡಿ ಎಂದು ಹೇಳುತ್ತಿದ್ದಂತೆಯೇ ರಸ್ತೆ ಬದಿ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಬಂದು ಮತ್ತಷ್ಟು ಅವಾಚ್ಯ ಶಬ್ದಗಳನ್ನು ಬಳಸಿ ಹಲ್ಲೆಗೆ ಎಎಸ್‌ಐ ಮುಂದಾಗಿದ್ದರು.

ಹಲ್ಲೆಗೆ ಸಂಬಂಧಿಸಿದಂತೆ ಕೆ.ಸಿ.ನಾರಾಯಣಸ್ವಾಮಿ ಎ.ಎಸ್.ಐ., ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೆ.ಸಿ.ನಾರಾಯಣಸ್ವಾಮಿ ಎ.ಎಸ್.ಐ  ಅವರುನ್ನುಅಮಾನತ್ತು ಮಾಡಲು ಆದೇಶ ಹೊರಡಿಸಲಾಗಿದೆ.

ಇಲಾಖೆ ಅಗೌರವ,ದುರ್ನಡತೆ, ಬೇಜಬ್ದಾರಿತನ,ಉದಾಸೀನ ತೋರಿದ ಹಿನ್ನೆಲೆ ಅಮಾನತುಮಾಡಲಾಗಿದೆ. ಕೋಲಾರ ಎಸ್ಪಿ ನಾರಾಯಣ ಅವರಿಂದ ಅಮಾನತು ಮಾಡಿ ಆದೇಶ. ಗಲಾಟೆ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿ ಎಲ್ಲೆಡೆ ವೈರಲ್ ಆಗಿತ್ತು. ಬಾರ್ ಅಸೋಸಿಯೇಷನ್ ನಿಂದ ಎಸ್ಪಿ ನಾರಾಯಣ ಬಳಿ ASI ವಿರುದ್ದ ದೂರು‌.

 

 

 

Related