ಲಸಿಕೆ ಪಡೆದಿದ್ದ ಆಶಾ ಕಾರ್ಯಕರ್ತೆ ಸಾವು!

ಲಸಿಕೆ ಪಡೆದಿದ್ದ ಆಶಾ ಕಾರ್ಯಕರ್ತೆ ಸಾವು!

ಬೆಳಗಾವಿ : ಚಿಕ್ಕೋಡಿ ತಾಲೂಕಿನ ಕಳೆದ ತಿಂಗಳು ಕೋವಿಡ್ ಲಸಿಕೆ ಪಡೆದಿದ್ದ ಗಳತಗಾ ಗ್ರಾಮದ ಆಶಾ ಕಾರ್ಯಕರ್ತೆಯೊಬ್ಬರು ಮೃತಪಟ್ಟಿದ್ದಾರೆ.
ಮೆದುಳಿಗೆ ಸಂಬಂಧಪಟ್ಟ  ಕಾಯಿಲೆ ಇತ್ತು ಕೋವಿಡ್ ಲಸಿಕೆಯಿಂದ ಮೃತಪಟ್ಟಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್ ವಿ ಮುನ್ಯಾಳ ಸ್ಪಷ್ಟಪಡಿಸಿದ್ದಾರೆ.

ಕಳೆದ ಜ. 22 ರಂದು ಕೋವಿಡ್ ಲಸಿಕೆ ಪಡೆದಿದ್ದ ಆಶಾ ಕಾರ್ಯಕರ್ತೆಗೆ ಮೊದಲಿಂದಲೂ ತಲೆನೋವು ಮೊದಲಾದ ಕಾಯಿಲೆಗಳಿದ್ದವು. ಜ. 30 ರಂದು ಸತತವಾಗಿ ವಾಂತಿಯಾಗಿದೆ.

ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಫೆ.3 ರಂದು ಮೃತಪಟ್ಟಿದ್ದಾರೆ. ಮೆದುಳಿನಲ್ಲಿ ರಕ್ತದ ಸಂಚಾರ ಸರಿಯಾಗಿರಲಿಲ್ಲ ಎಂದು ಡಾ ಎಸ್.ವಿ ಮುನ್ಯಾಳ ತಿಳಿಸಿದರು.

33 ವರ್ಷದ ಆಶಾ ಕಾರ್ಯಕರ್ತೆಯ ಸಾವಿಗೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ವೈದ್ಯಕೀಯ ದೃಢಪಟ್ಟಿದೆ. ಇದರ ಬಗ್ಗೆ ಇಲಾಖೆಯ ಮುಖ್ಯಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

Related