ಬಿಜೆಪಿ ವಿರೋಧಿ ಕಾಂಗ್ರೆಸ್ ಜನಧ್ವನಿ ಪ್ರತಿಭಟನೆ

ಬಿಜೆಪಿ ವಿರೋಧಿ ಕಾಂಗ್ರೆಸ್ ಜನಧ್ವನಿ ಪ್ರತಿಭಟನೆ

ಗಜೇಂದ್ರಗಡ : ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ದರ್ಬಳಕೆ ಮಾಡಿಕೊಂಡು ಭೂ ಸುಧಾರಣೆ ಕಾಯ್ದೆಗೆ ರೈತ ವಿರೋಧಿ ತಿದ್ದುಪಡಿ ಮಾಡಿದೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಹಶಿಲ್ದಾರ ಕಾರ್ಯಲಯದ ಮುಂದೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಭೂಸ್ವಾಧೀನ ಕಾಯ್ದೆ, ಕಾರ್ಮಿಕರ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಜನಧ್ವನಿ ಅಭಿಯಾನದ ಮೂಲಕ ನರೇಗಲ ಹಾಗೂ ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್‌ಯಿಂದ ಜನಧ್ವನಿ ಪ್ರತಿಭಟನೆ ನಡೆಯಿತು.

ದೇವರಾಜ ಅರಸು ಅವರು ಉಳುವವನೆ ಭೂಮಿಯ ಒಡೆಯ ಕಾಯ್ದೆಜಾರಿಗೆ ತಂದಿದ್ದರು. ಆದರೆ ಈಗ ಇದಕ್ಕೆ ತದ್ವಿರುದ್ಧವಾದ ಕಾಯ್ದೆಯನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಇಬ್ಬರೂ ಕೂಡ ಉಳುವವರಿಗೆ ಭೂಮಿ ಸಿಗುವ ಕಾನೂನು ತಂದುಕೊಟ್ಟವರು. ಕೊರೋನಾ ವಿಚಾರದಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದರು.

ಬಳಿಕ ಪುರಸಭೆ ಸದಸ್ಯೆ ರಾಜೂ ಸಾಂಗ್ಲಿಕರ ಮಾತನಾಡಿ ಕೊರೋನಾ ಸಂದರ್ಭದಲ್ಲಿ ಈ ರೀತಿಯ ರೈತ ವಿರೋಧಿ ನೀತಿಯನ್ನು ತಂದಿದ್ದಾರೆ ಇದು ಸರಿಯಲ್ಲ, ಎ.ಪಿ.ಎಮ್.ಸಿ.ಯಲ್ಲಿ ರೈತರು ತಮ್ಮ ಬೆಳೆಯನ್ನು ತಂದು ಮಾರಾಟ ಮಾಡುವುದಕ್ಕೆ ಬ್ರೇಕ್ ಹಾಕಿದ್ದಾರೆ. ಬಿ.ಜೆ.ಪಿ. ಸರ್ಕಾರವೂ ಶ್ರೀಮಂತರ ಪರ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related