ಮಂಡ್ಯದಲ್ಲಿ ಮತ್ತೊಂದು ಪವಾಡ

ಮಂಡ್ಯದಲ್ಲಿ ಮತ್ತೊಂದು ಪವಾಡ

ಮಂಡ್ಯ : ಸಕ್ಕರೆನಾಡು ಮಂಡ್ಯದಲ್ಲಿ ಇದು  ಬಸಪ್ಪ ಅಲ್ಲ; ಸಾಕ್ಷಾತ್ ದೈವಿ ಸ್ಚರೂಪದ ಬಸಪ್ಪ ಯಾವುದೇ ಊರಿಗೆ ಪೂಜೆಗೆ ಹೋದರೂ ಸಮಸ್ಯೆ ಬಗೆಹರಿಸಿ ಅಲ್ಲಿ ಒಂದಲ್ಲ ಒಂದು ಪವಾಡ ಮಾಡುತ್ತಿದಾನೆ. ಮತ್ತೊಂದು ಪವಾಡ ಮಾಡಿದ್ದು, ದೇವರ ಹುಂಡಿ ಕದ್ದಿದ್ದ ಕಳ್ಳನನ್ನು ಪತ್ತೆಮಾಡಿ ಕೊಡುವ ಮೂಲಕ ಗ್ರಾಮಾಸ್ಥರ ಮೆಚ್ಚುಗೆ ಪಡೆದರು.

ನಾಗಮಂಗಲದ ಜುಟ್ಟನಹಳ್ಳಿ ಗ್ರಾಮದಲ್ಲಿ ಪಾದಪೂಜೆಗೆಂದು ಬಂದಿದ್ದ ಈ ಬಸಪ್ಪ ಗ್ರಾಮಸ್ಥರ ಕೋರಿಕೆ ಮೇರೆಗೆ ಕಳೆದ 2 ತಿಂಗಳಿನಲ್ಲಿ ಊರಿನ ಮಧ್ಯದಲ್ಲಿದ್ದ ಮಾರಮ್ಮನ ದೇವಾಲಯದಲ್ಲಿ ದೇವರ ಹುಂಡಿ ಕದ್ದಿದ್ದ ದೇವಾಲಯದ ಅರ್ಚಕನನ್ನು ಪತ್ತೆ ಮಾಡಿದ್ದು, ಮನೆಯಲ್ಲಿದ್ದ ಅರ್ಚಕನನ್ನು ಮನೆಯಿಂದ ದೇವಾಲಯದವರೆಗೂ ರಸ್ತೆಯಲ್ಲಿ ತಿವಿಯುತ್ತಾ ಕರೆತಂದು ಜನರ ಮುಂದೆ ನಿಲ್ಲಿಸಿದೆ.

ಕದ್ದ ಅರ್ಚಕ ಕೊನೆಗೆ ಬಸಪ್ಪನ ಕಾಲಿಗೆ ಬಿದ್ದು ತನ್ನ ತಪ್ಪನ್ನು ಒಪ್ಪಿಕೊಂಡು ಕದ್ದ ದೇವರ ಹುಂಡಿ ಹಣವನ್ನು ಕೊಡುವುದಾಗಿ ಹೇಳಿದ ಮೇಲೆ ಸುಮ್ಮನಾಗಿದೆ. ಬಸಪ್ಪ ಮಾಡಿದ ಈ ಪವಾಡಕ್ಕೆ ಊರಿನ ಜನರು ಮರುಳಾಗಿ ಬಸಪ್ಪನ ಪವಾಡವನ್ನು ಕೊಂಡಾಡಿದ್ದಾರೆ.

ಜುಟ್ಟನಹಳ್ಳಿಯಲ್ಲಿ ದೇಗುಲದ ಕಳ್ಳ ಅರ್ಚಕನನ್ನು ಪತ್ತೆ ಮಾಡಿಕೊಟ್ಟ ತಮ್ಮ ಈ ಬಸಪ್ಪನ ಪವಾಡದ ಬಗ್ಗೆ ಇದನ್ನು ನೋಡಿಕೊಳ್ಳುತ್ತಿರುವ ದೇವರ ಗುಡ್ಡಪ್ಪ ಸುಖೇಶ್ ಹೆಮ್ಮೆಯಿಂದ ಈ ಬಸಪ್ಪ ನಿಜಕ್ಕೂ ದೈವೀ ಸ್ವರೂಪವಿದೆ ಎಂದು ಹೇಳಿದರು.

Related