ನ್ಯಾಷನಲ್ ಕ್ರಶ್ ನ ಬಾಲಿವುಡ್ ನ ಮತ್ತೊಂದು ಚಿತ್ರ ಬಿಡುಗಡೆಗೆ ಸಜ್ಜು

ನ್ಯಾಷನಲ್ ಕ್ರಶ್ ನ ಬಾಲಿವುಡ್ ನ ಮತ್ತೊಂದು ಚಿತ್ರ ಬಿಡುಗಡೆಗೆ ಸಜ್ಜು

ನ್ಯಾಷನಲ್ ಕ್ರಶ್ ರಶ್ಮಿಕ ಮಂದಣ್ಣ ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಹಿಂದಿ ಇನ್ನು ಹಲವಾರು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಅವರ ಬಾಲಿವುಡ್ ನ ಮತ್ತೊಂದು ಚಿತ್ರ ಸೆಟೆರಲು ಸಜ್ಜಾಗಿದೆ.

ಬಾರಿ ಇವರು ವಿಕ್ಕಿ ಕೌಶಲ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಅಭಿನಯದ ಪಿರಿಯಡ್‌ ಡ್ರಾಮಾ ‘ಛಾವಾ’ ಚಿತ್ರೀಕರಣದ ದಿನಾಂಕ ಹೊರಬಿದ್ದಿದೆ.

ಮುಂಬರುವ ‘ಛಾವಾ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ವಿಕ್ಕಿ ಕೌಶಲ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಈ ಚಲನಚಿತ್ರವು ಹೆಸರಾಂತ ಐತಿಹಾಸಿಕ ಯೋಧನಿಗೆ ಗೌರವ ಸಲ್ಲಿಸುವ ಕಥೆ ಹೊಂದಿದೆ.

ವರದಿಯ ಪ್ರಕಾರ, ಅಕ್ಟೋಬರ್ 16 ರಂದು ಮುಂಬೈನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದು, ಮೊದಲ ಶೆಡ್ಯೂಲ್ ಒಂದು ವಾರದವರೆಗೆ ಇರುತ್ತದೆ.

ಲಕ್ಷ್ಮಣ್ ಉಟೇಕರ್ ಪ್ರಸ್ತುತ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ಸಂಭಾಜಿ ಮಹಾರಾಜರ ಸುತ್ತ ಕೇಂದ್ರೀಕೃತವಾದ ಐತಿಹಾಸಿಕ ನಾಟಕದ ನಿರ್ಮಾಣದಲ್ಲಿ ತಲ್ಲೀನರಾಗಿದ್ದಾರೆ.

ನಟ ವಿಕ್ಕಿ ಕೌಶಲ್ ಮತ್ತೊಮ್ಮೆ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರೊಂದಿಗೆ ಸಹಕರಿಸಲು ಸಿದ್ಧರಾಗಿದ್ದಾರೆ. ಇದಕ್ಕೂ ಮೊದಲು ವಿಕ್ಕಿ ಇವರ ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾದಲ್ಲಿ ಜೊತೆಯಾಗಿದ್ದರು.

 

 

Related