ಕ್ರೀಡಾ ಶಿಕ್ಷಕರಿಗೆ ಉತ್ಸಹ ತುಂಬಲು ಸನ್ಮಾನ: ಬಿ.ನಾಗೇಂದ್ರ!

ಕ್ರೀಡಾ ಶಿಕ್ಷಕರಿಗೆ ಉತ್ಸಹ ತುಂಬಲು ಸನ್ಮಾನ: ಬಿ.ನಾಗೇಂದ್ರ!

ಬೆಂಗಳೂರು: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಇತ್ತೀಚಿಗೆ ಕ್ರೀಡಾಪಟುಗಳು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ನಮಗೆಲ್ಲರಿಗೂ ಸಂತೋಷದ ವಿಷಯ ಎಂದು ಕ್ರೀಡಾ ಸಚಿವರಾದ ಬಿ ನಾಗೇಂದ್ರ ಅವರು ಹೇಳಿದರು.

ಇನ್ನು ಭಾರತ ಸರ್ಕಾರವು ಹಾಕಿ ಮಾಂತ್ರಿಕ ಹಾಗೂ ಶ್ರೇಷ್ಠ ಕ್ರೀಡಾಪಟು ಧ್ಯಾನ್ ಚಂದ್ ಅವರ ಮಹಾನ್ ಸಾಧನೆಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಅಂದಿನಿಂದ ರಾಷ್ಟ್ರೀಯ ಕ್ರೀಡಾದಿನವನ್ನು ಆಚರಿಸಲಾಗುತ್ತದೆ ಎಂದು ಕ್ರೀಡಾ ಸಚಿವ ನಾಗೇಂದ್ರ ಹೇಳಿದರು.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ದಿವಸ ಬಹಳ ಮುಖ್ಯ, ಎಲ್ಲಾ ವಿದ್ಯಾರ್ಥಿಗಳು ಬಂದು ಕ್ರೀಡಾ ಚಟುವಟಿಕೆ ಮಾಡುತ್ತಿರುವುದು ಖುಷಿ ತಂದಿದೆಮುಂದೆ ರಾಜ್ಯ, ರಾಷ್ಟ್ರದ ಮಟ್ಟದಲ್ಲಿ ಅಲ್ಲ ಪ್ರಪಂಚದಲ್ಲಿ ಕನ್ನಡಿಗರು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡ್ತಾರೆ.

ಧ್ಯಾನ್ ಚಂದ್ ಹುಟ್ಟಿದ ಹಬ್ಬದ ಅಂಗವಾಗಿ ಕ್ರೀಡಾ ಶಿಕ್ಷಕರಿಗೆ ಉತ್ಸಹ ತುಂಬಲು ಸನ್ಮಾನ. ಇದು ಹೆಗ್ಗಳಿಕೆಯ ವಿಷಯ ಮುಂದೆ ಕ್ರೀಡೆಯನ್ನು ಉನ್ನತ ಸ್ಥಾ‌ಕ್ಕೆ ತಲುಪಯತ್ತದೆ. ತರಬೇತಿಗೂ ಸಹ ಸರ್ಕಾತ ಒತ್ತು ಕೊಡುತ್ತಿದೆ ಎಂದು ಹೇಳಿದರು.

 

Related