ಇನ್ನೂ 1 ವಾರ ರಾಜ್ಯದ ಎಲ್ಲ ಪಾರ್ಕ್ ಗಳು ಬಂದ್

  • In State
  • March 14, 2020
  • 277 Views
ಇನ್ನೂ 1 ವಾರ ರಾಜ್ಯದ ಎಲ್ಲ ಪಾರ್ಕ್ ಗಳು ಬಂದ್

ಬೆಂಗಳೂರು, ಮಾ. 14: ಇತ್ತೀಚಿನ ಕೆಲವು ದಿನಗಳಲ್ಲಿ ಕೊರೊನಾ ವೈರಸ್ ಕಾಯಿಲೆಯು ವಿಶ್ವದಾದ್ಯಂತ ಹರಡಿ ಎಲ್ಲ ಜನ ಜೀವನವನ್ನು ಬೆಚ್ಚಿಬೀಳಿಸುತ್ತದೆ.

ಹೌದು, ವಿಶ್ವದಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರವು ಹಲವು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ಎಲ್ಲ ಪಾರ್ಕ್ ಗಳನ್ನು ಬಂದ್ ಮಾಡಲಾಗಿದೆ.

ಇನ್ನು ಪಾರ್ಕ್ ಬಂದ್ ಮಾಡಿದ್ದರಿಂದ ವಾಯುವಿಹಾರಿಗಳು ತೊಂದರೆ ಅನುಭವಿಸಬೇಕಾಯಿತು. ಬೆಳಂ ಬೆಳಗ್ಗೆಯೇ ದೊಡ್ಡ ಸಂಖ್ಯೆಯಲ್ಲಿ ಪಾರ್ಕ್ ಗಳಿಗೆ ಆಗಮಿಸುವ ವಾಯುವಿಹಾರಿಗಳು, ಮಕ್ಕಳು ಹಾಗೂ ಸಾರ್ವಜನಿಕರು ವಾಪಸ್ ಆಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬೆಂಗಳೂರಿನ ಕಬ್ಬನ್ ಪಾರ್ಕ್, ಲಾಲ್ ಬಾಗ್, ಜೆಪಿ ಪಾರ್ಕ್ ಸೇರಿದಂತೆ ಬಹುತೇಕ ಪಾರ್ಕ್ ಗಳನ್ನು ಇನ್ನೂ ಒಂದು ವಾರಗಳ ಕಾಲ ಮುಚ್ಚಲಾಗಿದೆ.

 

Related