ರಾಜ್ಯದ ರಾಜಧಾನಿ ಮತದಾನಕ್ಕೆ ಸಕಲ ಸಿದ್ಧತೆ

ರಾಜ್ಯದ ರಾಜಧಾನಿ ಮತದಾನಕ್ಕೆ ಸಕಲ ಸಿದ್ಧತೆ

ಬೆಂಗಳೂರು: 2023 ನೇ ಸಾಲಿನ ವಿಧಾನಸಭಾ ಚುನಾವಣೆಯ ಮತದಾನದ ದಿನಾಂಕ ಇನ್ನೇನು ಕೇವಲ ಎರಡು ದಿನ ಮಾತ್ರ ಬಾಕಿ ಇದ್ದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮತದಾನಕ್ಕೆ ಬೇಕಾಗಿರುವಂತ ಸಕಲ ಸಿದ್ಧತೆಯನ್ನು ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಇದೇ ಮೇ 10ರಂದು ಮತದಾನ ನಡೆಯಲಿದ್ದು ನಗರದ್ಯಾಂತ ಮತದಾನಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿದ್ದು ಯಾವುದೇ ಕೊರತೆಯಾಗದಂತೆ ಅಧಿಕಾರಿಗಳು ಗಮನಹರಿಸುತ್ತಿದ್ದಾರೆ. ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಸಂಪೂರ್ಣ ಮಾಹಿತಿ ನೀಡಿದ್ದಾರೆ.

ನಗರದ ಸೇಂಟ್ ಜೋಸೆಫ್ ಶಾಲೆಯಲ್ಲಿ ಬೆಂಗಳೂರು ಅರ್ಬನ್ ಸ್ಟ್ರಾಂಗ್ ರೂಂ ಸ್ಥಾಪಿಸಲಾಗಿದೆ. 9 ಸ್ಟ್ರಾಂಗ್ ರೂಂ, 14 ಕೌಂಟಿಂಗ್ ಹಾಲ್, 1 ಡಿಇಒ ಹಾಗು ಎಡಿಇಒ ರೂಂ, 1 ಮೀಡಿಯಾ ರೂಂ, 1 ಅಬ್ಸರ್ವರ್ ರೂಂ ಸ್ಥಾಪಿಸಲಾಗಿದೆ. ಬ್ಯಾಟರಾಯನಪುರ ಹಾಗು ಯಲಹಂಕ ಕ್ಷೇತ್ರಗಳಿಗೆ ಮಾತ್ರ 2 ಸ್ಟ್ರಾಂಗ್ ರೂಂ ಇರಲಿದೆ. ಚುನಾವಣಾ ಹಿನ್ನೆಲೆ ಸಂಜೆಯಿಂದ ಮದ್ಯ ಮಾರಾಟ ನಿಷೇಧವಿದೆ. ಈಗಾಗಲೇ ಅನೇಕ ಕಾರಣಗಳಿಂದ 200ಕ್ಕೂ ಹೆಚ್ಚು ಬಾರ್‌ಗಳನ್ನು ಮುಚ್ಚಿಸಲಾಗಿದೆ. ಬಾರ್‌ ಗಳನ್ನು ಮುಚ್ಚದೇ ಇದ್ದರೆ ಲೈಸೆನ್ಸ್ ಕ್ಯಾನ್ಸಲ್ ಮಾಡಲಾಗುತ್ತೆ ಎಂದು ಮಾಹಿತಿ ನೀಡಿದರು.

ಇನ್ನು ಸುಮಾರು 24-25 ರೌಂಡ್‌ ಗಳಲ್ಲಿ ಕೌಂಟಿಂಗ್ ನಡೆಸಲಾಗುತ್ತೆ. ಹೀಗಾಗಿ ಕೌಂಟಿಗ್ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟು ಏಳು ವಿಧಾನಸಭಾ ಕ್ಷೇತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿಸಿಟಿವಿ ಕ್ಯಾಮರ ಹಾಗೂ ಕೌಂಟಿಗ್ ಬೇಕಾದ ಸಿದ್ಧತೆಯನ್ನ ಮಾಡಿಕೊಳ್ಳಲಾಗಿದೆ. ಬಿಲ್ಡಿಂಗ್ ಹೊರಗಡೆಯೂ ನಾವು ಭದ್ರತೆ ಮಾಡಿಕೊಂಡಿದ್ದೇವೆ. ಹೆಚ್ಚು ಮತಗಟ್ಟೆ ಹಿನ್ನಲೆ 20 ರಿಂದ 30 ರೌಂಡ್ಸ್ ಇರುತ್ತೆ. ಮತಗಟ್ಟೆಗೆ ಅನುಗುಣವಾಗಿ ಮತ ಏಣಿಕೆಗೆ ರೌಂಡ್ಸ್ ಇರುತ್ತೆ. ಎಲ್ಲಾ ಟೆಬಲ್ ಗೂ ಸಿಸಿಟಿವಿ ಅಳವಡಿಸಲಾಗಿದೆ. ಮೂರು ಹಂತದ ಭದ್ರತೆಯನ್ನ ಮಾಡಿಕೊಳ್ಳಲಾಗಿದೆ. ಆಯೋಗದ ಎಸ್ ಒಪಿ ಪ್ರಕಾರ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ದಯಾನಂದ ಅವರು ತಿಳಿಸಿದ್ದಾರೆ.

Related