ಏರೋ ಇಂಡಿಯಾ ಅಪೆಕ್ಸ್ ಸಭೆ

ಏರೋ ಇಂಡಿಯಾ ಅಪೆಕ್ಸ್ ಸಭೆ

ಬೆಂಗಳೂರು : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ, ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದ ಸಮ್ಮೇಳನದಲ್ಲಿ ಏರೋ ಇಂಡಿಯಾ 2021ಗೆ ಸಂಬಂಧಿಸಿದಂತೆ ಅಪೆಕ್ಸ್ ಸಮಿತಿ ಸಭೆ ಜರುಗಿತು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮುಖ್ಯ ಮಂತ್ರಿಗಳ ಕೊಠಡಿಯಲ್ಲಿ ರಕ್ಷಣಾ ಮಂತ್ರಿಗಳನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ರಕ್ಷಣಾ ವಸ್ತುಪ್ರದರ್ಶನ ಸಂಸ್ಥೆಯ ನಿರ್ದೇಶಕ ಅಚಲ್ ಮಲ್ಹೋತ್ರಾ, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮತ್ತಿತರರು ಉಪಸ್ಥಿತರಿದ್ದರು.

Related