ನಗರಾಭಿವೃದ್ಧಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ನಗರಾಭಿವೃದ್ಧಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಗದಗ : ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್‌ಎನ್ ರುದ್ರೇಶ್ ಅವರ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ರುದ್ರೇಶ್ ಸಂಬಂಧಿಸಿದ ಮೂರು ಜಾಗಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ., ನಗರದ ನೌಕರರ ಭವನ ಬಳಿಯ ಕ್ವಾಟ್ರಸ್, ಜಿಲ್ಲಾಡಳಿತ ಭವನದ ಕಚೇರಿ ಹಾಗೂ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ನಗರಾಭಿವೃದ್ಧಿ ಅಧಿಕಾರಿ ಎಸ್‌ಎನ್ ರುದ್ರೇಶ್ ಆದಾಯಕಿಂತ ಹೆಚ್ಚಿನ ಆಸ್ತಿಗಳಿಸಿರುವ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಮಾಹಿತಿ ಇದೆ. ಅಧಿಕಾರಿ ಮನೆಯಲ್ಲಿ 250 ಗ್ರಾಂ ಚಿನ್ನಾಭರಣ, 1.50 ಲಕ್ಷ ನಗದು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ಎಸಿಬಿ ಡಿವೈಎಸ್ಪಿ ಮಹಾಂತೇಶ, ಗದಗ ಸಿಪಿಐ ವೈ.ಎಸ್.ಧರಣಾಯಿಕ್, ಸಿಪಿಐ ಸುನೀಲ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಲಾಗಿದೆ.

Related