ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿ ಸಾವು..!

  • In Crime
  • July 26, 2022
  • 219 Views
ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿ ಸಾವು..!

ರಾಯಚೂರು, ಜು 26 :  ಲಿಂಗಸುಗೂರು ತಾಲೂಕಿನ ಕಿಲ್ಲಾರಹಟ್ಟಿ ಗ್ರಾಮದ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ.

ಕಿಲ್ಲಾರಹಟ್ಟಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಮಲ್ಲಿಕಾರ್ಜುನ್(13) ಮೃತ ಬಾಲಕ. ಶಾಲಾ ಆವರಣದಲ್ಲಿ ಮಲ್ಲಿಕಾರ್ಜುನ್ ಕ್ರಿಕೆಟ್ ಆಡುವಾಗ ಚೆಂಡು ತರಲು ಹೋಗಿದ್ದ. ಈ ವೇಳೆ ನಿರ್ಮಾಣ ಹಂತದಲ್ಲಿರುವ ಬಿಸಿಯೂಟದ ಕೋಣೆಯ ಮೇಲಿನ ವಿದ್ಯುತ್ ತಂತಿ ಮಲ್ಲಿಕಾರ್ಜುನ್ಗೆ ತಗುಲಿದೆ. ಪರಿಣಾಮ ಮಲ್ಲಿಕಾರ್ಜುನ್ ಅಲ್ಲೇ ಸಾವನ್ನಪ್ಪಿದ್ದಾನೆ.
ಘಟನೆ ಹಿನ್ನೆಲೆ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿ ಸಾವಿನಿಂದ ಉಳಿದ ವಿದ್ಯಾರ್ಥಿಗಳ ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಮೃತ ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Related