ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಟಗಾರ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಟಗಾರ

ಮಡಿಕೇರಿ : ಅಂತರರಾಷ್ಟ್ರೀಯ ಹಾಕಿಪಟು ಸಣ್ಣುವಂಡ ಕೆ. ಉತ್ತಪ್ಪ ಅವರು ಸಂಜನಾ ಅವರೊಂದಿಗೆ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವಿರಾಜಪೇಟೆ ತಾಲ್ಲೂಕಿನ ಬಾಳಾಜಿ ಗ್ರಾಮದ ಯೆಲ್ಲೋ ಬ್ಯಾಂಬೂ ರೆಸಾರ್ಟ್ನಲ್ಲಿ ಭಾನುವಾರ ರಾತ್ರಿ ಕೊಡವ ಸಂಪ್ರದಾಯದಂತೆ ದಂಪತಿ ಮುಹೂರ್ತ ನೆರವೆರಿತು.

ಕೋವಿಡ್-19 ಕಾರಣದಿಂದ ಸರಳವಾಗಿ ನಡೆದ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತರಷ್ಟೇ ಪಾಲ್ಗೊಂಡಿದ್ದರು. ಇವರ ನಿಶ್ಚಿತಾರ್ಥ ಶನಿವಾರ ನೆರವೇರಸಲಾಯಿತ್ತು.

ಉತ್ತಪ್ಪ ಅವರು 2012ರ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅಂತರರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಇದುವರೆಗೂ 164 ಅಂತರರಾಷ್ಟ್ರೀಯ ಪಂದ್ಯವಾಡಿದ್ದಾರೆ.

Related