ವರ್ಷದಿಂದ ಬಾಗಿಲು ತೆರೆಯದ ಗ್ರಂಥಾಲಯ

ವರ್ಷದಿಂದ ಬಾಗಿಲು ತೆರೆಯದ ಗ್ರಂಥಾಲಯ

ಕೊಟ್ಟೂರು : ವಿದ್ಯಾರ್ಥಿಗಳ, ಅಕ್ಷರವಂತರ ಜ್ಞಾನಾರ್ಜನೆ ಮೂಡಿಸಬೇಕಾದ ತಾಲೂಕಿನ ಕೆ. ಅಯ್ಯನಹಳ್ಳಿ ಗ್ರಾ.ಪಂ ಸಾರ್ವಜನಿಕ ಗ್ರಂಥಾಲಯ ಹನ್ನೆರಡು ತಿಂಗಳಿAದ ಬಾಗಿಲು ಮುಚ್ಚಿದೆ.

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ, ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಅಕ್ಷರವಂತರ ಭವಿಷ್ಯಕ್ಕೆ ಬೆಳಕಾಗಬೇಕಾದ ಗ್ರಂಥಾಲಯ ಅಕ್ಷರಶ ಇದ್ದೂ ಇಲ್ಲದಂತ್ತಾಗಿದೆ.
ಗ್ರಂಥಾಲಯ ಯಾವಾಗ ಸಾರ್ವಜನಿಕರ ಪಾಲಿಗೆ ದೂರವಾಗಿ, ಅನಾಥವಾಯಿತೊ, ಗ್ರಂಥಾಲಯವಿದ್ದ ಕಟ್ಟಡ ಗ್ರಾಮಲೆಕ್ಕಾಧಿಕಾರಿ ಕಚೇರಿಯಾಗಿ ಪರಿವರ್ತನೆಯಾಯಿತು.

ಆದರೂ ಗ್ರಂಥಾಲಯ ಇಲಾಖೆ, ಗ್ರಂಥಾಲಯ ಮೇಲ್ವಿಚಾರಕರ ಇತ್ತ ಕಡೆ ಕಣ್ಣು ಹಾಯಿಸಲೇ ಇಲ್ಲ. ಆದರೆ ಗ್ರಂಥಾಲಯ ಮೇಲ್ವಿಚಾರರಿಗೆ ಇಂದಿಗೂ ಸಂಬಳಕ್ಕೇನೂ ಕೊರತೆಯಾಗಿಲ್ಲ.  ಇಷ್ಟೆಲ್ಲದರ ನಡುವೆ 2017-18ರಲ್ಲಿ ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ 15 ಲಕ್ಷ ರೂ. ವೆಚ್ಚದಲ್ಲಿ ಗ್ರಂಥಾಲಯಕ್ಕಾಗಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು, ಇನ್ನೂ ಉದ್ಘಾಟನೆಯ ಸೌಭಾಗ್ಯ ಕೂಡಿಬಂದಿಲ್ಲ.

ಒಂದು ವರ್ಷದಿಂದ ಗ್ರಂಥಾಲಯ ಬಾಗಿಲು ತೆರೆದಿಲ್ಲ. ನೂತನ ಕಟ್ಟಡ ನಿರ್ಮಾಣವಾಗಿ 2 ವರ್ಷ ಕಳೆದರೂ ಉದ್ಘಾಟನೆಯಾಗಿಲ್ಲ. ಇದರ ನಡುವೆ ಗ್ರಂಥಾಲಯ ಇಲಾಖೆ ಯಾವ ಸೌಭಾಗ್ಯಕ್ಕೆ ಈ ಗ್ರಂಥಾಲಯಕ್ಕೆ ಡಿಜಲಿಟಿಕರಣ ಮಂಜೂರು ಮಾಡಿದೆ ಎಂಬುದು ಅರ್ಥವಾಗದ ಸಂಗತಿ.  ಇಷ್ಟೆಲ್ಲ ದುರ್ವ್ಯವಸ್ಥೆಯ ಗ್ರಂಥಾಲಯ, ಅದಕ್ಕೊಬ್ಬ ಮೇಲ್ವಿಚಾರಕ ನಮ್ಮೂರಿಗೇಕೆ ಬೇಕು ಎಂಬುದು ಕೆ. ಅಯ್ಯನಹಳ್ಳಿ ಗ್ರಾಮಸ್ಥರ ದೂರುವುದಲ್ಲದೆ. ಮುಷ್ಕರದ ಎಚ್ಚರಿಕೆಯನ್ನು ನೀಡಿದ್ದಾರೆ.

Related