ನವದೆಹಲಿ, ಫೆ. 28 : ಟೆಸ್ಟ್ ನಲ್ಲಿ ನಂ ಒನ್ ಸ್ಥಾನದಲ್ಲಿರುವ ಟೀ ಇಂಡಿಯಾದ ನಂಬರ್ ಒನ್ ಸ್ಥಾನ ಕಸಿಯಲು ಕಿವೀಸ್ ರೆಡಿಯಾಗಿದೆ.
ನಾಳೆ ಕ್ರೈಸ್ಟ್ ಚರ್ಚ್ ಅಂಗಳದಲ್ಲಿ ಕೊಹ್ಲಿ ಪಡೆ ಕೇನ್ ಪಡೆಯ ವಿರುದ್ಧ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು ಆಡಲಿದೆ. ಎರಡನೇ ಪಂದ್ಯ ಕೇನ್ ಪಡೆ ವಿರುದ್ಧ ವಿರಾಟ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ. ಟೆಸ್ಟ್ ಫಾರ್ಮೆಟ್ನಲ್ಲಿ ನಂ. 1 ಪಟ್ಟ ಉಳಿಸಿಕೊಳ್ಳಬೇಕಿದ್ದಲ್ಲಿ ಕೇನ್ ವಿಲಿಯಮ್ಸನ್ ಪಡೆ ವಿರುದ್ಧ ಶತಾಯ ಗತಾಯವಾಗಿದೆ. ವಿರಾಟ್ ಪಡೆ ಹೀನಾಯವಾಗಿ ಸೋತು ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಮೊದಲ ಸೋಲು ಕಂಡಿತ್ತು. ಇದರ ಪರಿಣಾಮವೇ ವಿರಾಟ್ ಪಡೆ ನಂ.1 ಪಟ್ಟವನ್ನ ಕಳೆದುಕೊಳ್ಳುವ ಭೀತಿಯಲ್ಲಿದೆ.