ನಂ.1 ಪಟ್ಟ ಕಸಿಯಲು ಕಿವೀಸ್ ಪ್ಲ್ಯಾನ್.!

ನಂ.1 ಪಟ್ಟ ಕಸಿಯಲು ಕಿವೀಸ್ ಪ್ಲ್ಯಾನ್.!

ನವದೆಹಲಿ, ಫೆ. 28 : ಟೆಸ್ಟ್ ನಲ್ಲಿ ನಂ ಒನ್ ಸ್ಥಾನದಲ್ಲಿರುವ   ಟೀ ಇಂಡಿಯಾದ ನಂಬರ್ ಒನ್ ಸ್ಥಾನ ಕಸಿಯಲು ಕಿವೀಸ್ ರೆಡಿಯಾಗಿದೆ.

ನಾಳೆ ಕ್ರೈಸ್ಟ್ ಚರ್ಚ್​ ಅಂಗಳದಲ್ಲಿ ಕೊಹ್ಲಿ ಪಡೆ ಕೇನ್ ಪಡೆಯ ವಿರುದ್ಧ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು ಆಡಲಿದೆ. ಎರಡನೇ ಪಂದ್ಯ ಕೇನ್ ಪಡೆ ವಿರುದ್ಧ ವಿರಾಟ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ. ಟೆಸ್ಟ್ ಫಾರ್ಮೆಟ್​ನಲ್ಲಿ ನಂ. 1 ಪಟ್ಟ ಉಳಿಸಿಕೊಳ್ಳಬೇಕಿದ್ದಲ್ಲಿ ಕೇನ್ ವಿಲಿಯಮ್ಸನ್​ ಪಡೆ ವಿರುದ್ಧ ಶತಾಯ ಗತಾಯವಾಗಿದೆ. ವಿರಾಟ್ ಪಡೆ ಹೀನಾಯವಾಗಿ ಸೋತು ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಮೊದಲ ಸೋಲು ಕಂಡಿತ್ತು. ಇದರ ಪರಿಣಾಮವೇ ವಿರಾಟ್ ಪಡೆ ನಂ.1 ಪಟ್ಟವನ್ನ ಕಳೆದುಕೊಳ್ಳುವ ಭೀತಿಯಲ್ಲಿದೆ.

Related