ಬ್ಲ್ಯಾಕ್ ಕೋಬ್ರಾಗೆ 50ನೇ ಹುಟ್ಟುಹಬ್ಬದ ಸಂಭ್ರಮ

ಬ್ಲ್ಯಾಕ್ ಕೋಬ್ರಾಗೆ 50ನೇ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬ್ಲಾಕ್ ಕೋಬ್ರಾಯಂದೆ ಹೆಸರುವಾಸಿಯಾಗಿರುವ ನಟ ದುನಿಯಾ ವಿಜಯ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.

ಹೌದು, ಸ್ಯಾಂಡಲ್ ವುಡ್ ನ ಬ್ಲಾಕ್ ಕೋಬ್ರಾ ನಟ ದುನಿಯಾ ವಿಜಯ ಅವರಿಗೆ ಇಂದು 50ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಇನ್ನು ಅಭಿಮಾನಿಗಳು ನಟ ದುನಿಯಾ ವಿಜಯ್ ಅವರಿಗೆ ಹುಟ್ಟು ಹಬ್ಬ ಶುಭಾಶಯ ಕೋರಿದ್ದಾರೆ.

ಇನ್ನು ವಿಜಯ್ ಅವರು ಅಭಿಮಾನಿಗಳಲ್ಲಿ ಫ್ಲೇಕ್ಸ್ ಬ್ಯಾನರ್ ಇನ್ನಿತರ ಚಟುವಟಿಕೆಗಳನ್ನು ನನ್ನ ಹುಟ್ಟುಹಬ್ಬಕ್ಕೆಂದು ಯಾವೊಬ್ಬ ಅಭಿಮಾನಿಗಳು ಮಾಡಬಾರದೆಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ತಮ್ಮ ಹುಟ್ಟುಹಬ್ಬವನ್ನು ತಮ್ಮ ಹುಟ್ಟೂರಾದ ಆನೇಕಲ್‌ ಬಳಿಯ ಕುಂಬಾರನಹಳ್ಳಿಯಲ್ಲಿ ಆಚರಿಸಕೊಳ್ಳಲಿದ್ದಾರೆ. ಈ ಸಮಯದಲ್ಲಿಅವರು ಅಭಿಮಾನಿಗಳಿಗೆ ಫ್ಲೆಕ್ಸ್‌, ಬ್ಯಾನರ್‌ ಕಟ್ಟದಂತೆ ಮನವಿ ಮಾಡಿದ್ದಾರೆ.

‘ಪ್ರತಿ ಬಾರಿಯಂತೆ ಈ ಬಾರಿಯೂ ಅಭಿಮಾನಿಗಳ ಜತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೇನೆ. ಕಳೆದ ಬಾರಿ ಅಭಿಮಾನಿಯೊಬ್ಬರು ನಡೆದುಕೊಂಡೇ ಹುಟ್ಟುಹಬ್ಬಕ್ಕೆ ಬಂದಿದ್ದರು. ಹಾಗಾಗಿ ಕೈ ಮುಗಿದು ಕೇಳಿಕೊಳ್ಳುತ್ತೇನೆ, ಯಾವ ಅಭಿಮಾನಿಯೂ ಸಹ ಈ ಬಾರಿ ನಡೆದುಕೊಂಡು ಬರಬೇಡಿ. ಕೇಕ್‌ ಮತ್ತು ಹೂವಿನ ಹಾರ ತರಬೇಡಿ. ನನಗೆ ನಿಮ್ಮ ಜತೆ ಕುಳಿತು ಪ್ರೀತಿಯಿಂದ ಊಟ ಮಾಡುವ ಆಸೆ ಇದೆ. ಹಾಗಾಗಿ, ಊಟಕ್ಕಾಗಿ ಬನ್ನಿ’ ಎಂದು ‘ದುನಿಯಾ’ ವಿಜಯ್‌ ಅವರು ಹೇಳಿದ್ದಾರೆ.

 

 

 

 

 

 

Related