200 ಯೂನಿಟ್ ಫ್ರೀ ವಿದ್ಯುತ್ ಸ್ಕೀಂ ಸರ್ಕಾರಕ್ಕೆ ಹೊಸ ತಲೆನೋವು!

200 ಯೂನಿಟ್ ಫ್ರೀ ವಿದ್ಯುತ್ ಸ್ಕೀಂ ಸರ್ಕಾರಕ್ಕೆ ಹೊಸ ತಲೆನೋವು!

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಚುನಾವಣೆಯ ಮುನ್ನ 5 ಗ್ಯಾರಂಟಿಗಳನ್ನು ಘೋಷಿಸಿದ್ದು, ಐದು ಗ್ಯಾರಂಟಿಗಳಲ್ಲಿ ಒಂದಾದ 200 ಯೂನಿಟ್ ಉಚಿತ ವಿದ್ಯುತ್ ಎಂದು ಘೋಷಿಸಿದ್ದ ಕಾಂಗ್ರೆಸ್ ಪಕ್ಷವು ಈಗ ಅಧಿಕಾರದಲ್ಲಿದ್ದು ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೆ ತಂದಿದೆ. ಇನ್ನು ಸಿಲಿಕಾನ್ ಸಿಟಿಜನ 200 ಯೂನಿಟ್ ವಿದ್ಯುತ್ ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಲು ಮುಂದಾಗಿದ್ದಾರೆ.

ಹೌದು, ಈ ಮಧ್ಯೆ ಫ್ರೀ ವಿದ್ಯುತ್ ಸದ್ಬಳಕೆಗಾಗಿ ರಾಜ್ಯಾದ್ಯಂತ ಜನರು ತಮ್ಮದೇ ಆದ ಸ್ಕೀಂಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಸದ್ಯಕ್ಕೆ 200 ಯೂನಿಟ್ ಉಚಿತ ವಿದ್ಯುತ್ ಸ್ಕೀಂ ಹೊಸ ತಲೆ ಬಿಸಿ ತಂದಿದೆ. 200 ಯೂನಿಟ್ ಉಚಿತ್ ವಿದ್ಯುತ್ ಕಂಪ್ಲೀಟ್ ಲಾಭ ಪಡೆಯಲು ಬೆಂಗಳೂರು ಸಿಟಿ ಜನ ತಿಂಗಳ ಪೆಟ್ರೋಲ್ ಕಾಸು ಉಳಿಸುವ ನಯಾ ಪ್ಲಾನ್ ಹಾಕಿಕೊಂಡಿದ್ದಾರೆ. ಪೆಟ್ರೋಲ್ ದುಡ್ಡು ಸೇವ್ ಮಾಡಲು ಸಾರ್ವಜನಿಕರು ಹೊಸ ತಂತ್ರ ಹೂಡಿದ್ದು, 200 ಯೂನಿಟ್ ಉಚಿತ್ ಘೋಷಣೆ ಬೆನ್ನಲೆ ಇ.ವಿ. ಬೈಕ್ಸ್ ಗೆ ಸಖತ್ ಡಿಮ್ಯಾಂಡ್ ಇಟ್ಟಿದ್ದಾರೆ. ಸಿಟಿಯಲ್ಲಿ ಇವಿ ಬೈಕ್ ಖರೀದಿಗೆ ಜನ ಮುಂದಾಗಿದ್ದಾರೆ.

ಪ್ರತಿ ತಿಂಗಳಿಗೆ ಸಿಲಿಕಾನ್ ಸಿಟಿಯಲ್ಲಿ ಸಂಚಾರಕ್ಕೆ ಸಾಮಾನ್ಯವಾಗಿ 2000 ರಿಂದ 2500 ಸಾವಿರದವರೆಗೆ ಪೆಟ್ರೋಲ್ ಬೇಕು. ಈಗ ಸರ್ಕಾರ ಉಚಿತ 200 ಯೂನಿಟ್ ಬೆನ್ನಲ್ಲೇ ಇ.ವಿ. ಬೈಕ್ ಗಳ ಮೊರೆ ಹೋಗ್ತಿದ್ದಾರೆ. ಮನೆ ಕರೆಂಟ್ ಬಿಲ್ 600 ರಿಂದ 800 ರೂ ಒಳಗಡ ಬರುತ್ತೆ. ಉಳಿದ ಫ್ರೀ ಯೂನಿಟ್ ಯಾಕೆ ಬೀಡಬೇಕು. ಪೆಟ್ರೋಲ್ ಗೆ ಕಾಸು ಸುರಿಯುವ ಬದಲು ಇ.ವಿ. ಬೈಕ್ ಖರೀದಿಸಿದ್ರೆ ಎಲ್ಲಾ ಸಮ ಸಮ ಆಗುತ್ತದೆ. ಇದರಿಂದ 2,500 ರಿಂದ 3,000 ರೂಪಾಯಿ ವರೆಗೆ ಹೆಚ್ಚುವರಿಯಾಗಿ ಪ್ರತಿ ತಿಂಗಳು ಉಳಿತಾಯ ಮಾಡುವ ಲೆಕ್ಕಾಚಾರದಲ್ಲಿದ್ದಾರೆ ಜನ.

 

Related