ಕೊರೊನಾ ಮಧ್ಯೆಯೂ ಜಾತ್ರೆ ಮಹೋತ್ಸವ

ವಿಜಯಪುರ : ರೂಪಾಂತರಿ ಕೊರೋನಾ ಅಟ್ಟಹಾಸದ ಮಧ್ಯೆಯೂ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಕ್ಕಳಮೇಲಿ ಗ್ರಾಮದ ಸಿದ್ದಲಿಂಗೇಶ್ವರ ಜತ್ರೋತ್ಸವ ಶನಿವಾರ ಅದ್ಧೂರಿಯಾಗಿ ನಡೆದಿದೆ.

ರಥೋತ್ಸವದಲ್ಲಿ ಕಲಬುರಗಿ, ರಾಯಚೂರು, ಬೀದರ್, ಗದಗ, ಬಾಗಲಕೋಟೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಸರ್ಕಾರ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ ಮಾಡಿದ್ದರೂ ಜಾತ್ರೆಯಲ್ಲಿ ಯಾವುದೇ ನಿಯಮಗಳನ್ನು ಪಾಲಿಸಲಾಗಿಲ್ಲ. ಈಚೆಗೆ ವಿಜಯಪುರ ಜಿಲ್ಲೆಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಕೆಸ್ಗಳು ವರದಿಯಾಗುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.

ಜಾತ್ರೆಯಲ್ಲಿ ಎಷ್ಟು ಜನ ಭಾಗವಹಿಸಿದ್ದಾರೆ, ಮುಂದಾಳತ್ವ ಯಾರು ವಹಿಸಿದ್ದಾರೆಂದು ಮಾಹಿತಿ ಕಲೆಹಾಕಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ತಾಪಂ ಮುಖ್ಯಾಧಿಕಾರಿಗೆ ಗ್ರಾಮಕ್ಕೆ ಹೋಗಲು ತಿಳಿಸಿದ್ದು ಸಂಬAಧಿಸಿದವರ ಮೇಲೆ ಕಠಿಣ ಕ್ರಮ ಜರಗಿಸಲು ಹೇಳಿದೇನೆ. ಯಾವ ಯಾವ ಗ್ರಾಮಗಳಲ್ಲಿ ಯಾವಾಗ ಜಾತ್ರೆಗಳು, ಮದುವೆಗಳು, ಸಮಾರಂಭಗಳು ಇವೆ. ಎಲ್ಲ ಮಾಹಿತಿ ಪಡೆಯಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಸಿಂದಗಿ ತಹಶೀಲ್ದಾರ್ ಸಂಜುಕುಮಾರ ದಾಸರ ತಿಳಿಸಿದ್ದಾರೆ.

Related