ರಾಮಮಂದಿರ ಉದ್ಘಾಟನೆ ದಿನದಂದು ಧ್ರುವ ಸರ್ಜಾ ಮಕ್ಕಳಿಗೆ ನಾಮಕರಣ ಮಾಡುತ್ತಿರುವುದು ಯಾಕೆ?

ರಾಮಮಂದಿರ ಉದ್ಘಾಟನೆ ದಿನದಂದು ಧ್ರುವ ಸರ್ಜಾ ಮಕ್ಕಳಿಗೆ ನಾಮಕರಣ ಮಾಡುತ್ತಿರುವುದು ಯಾಕೆ?

ಬೆಂಗಳೂರು: ಇಂದು ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ಉದ್ಘಾಟನೆಗೆಂದು ಚಿತ್ರರಂಗ, ಕ್ರಿಕೆಟ್ ರಂಗ ಸೇರಿದಂತೆ ಗಣ್ಯಾತಿ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇನ್ನು ಅಯೋಧ್ಯ ಸುತ್ತಮುತ್ತಲು ಬಿಗಿ ಭದ್ರತೆಯನ್ನು ಒದಗಿಸಲಾಗಿದ್ದು ಯಾವೊಂದು ಅಹಿತಕರ ಘಟನೆ ನಡೆದಂತೆ ನೋಡಿಕೊಳ್ಳಲಾಗುತ್ತಿದೆ.

ಇನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಧ್ರುವ ಸರ್ಜಾ ಅವರ ಮಕ್ಕಳಿಗೆ ಇಂದು ನಾಮಕರಣ ನಡೆಯಲಿದ್ದು ರಾಮ ಮಂದಿರದ ಉದ್ಘಾಟನೆಯ ದಿನದಂದು ಈ ವಿಶೇಷ ಕಾರ್ಯಕ್ರಮವನ್ನು ಇಟ್ಟುಕೊಂಡಿರುವ ಧ್ರುವ ಸರ್ಜಾ ಅವರು, ಮಹಾಭಾರತ ಮತ್ತು ರಾಮಾಯಣದಲ್ಲಿರುವಂತಹ ಹೆಸರುಗಳನ್ನೇ ತಮ್ಮ ಮಕ್ಕಳಿಗೆ ಇಡಲಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ಧ್ರುವ ಸರ್ಜಾ ಅವರು ತಮ್ಮ ಮಕ್ಕಳಿಗೆ ನಾಮಕರಣ ಮಾಡಲು ಮುಂದಾಗಿದ್ದಾರೆ. ರಾಮಾಯಣ ಮಹಾಭಾರತದಲ್ಲಿ ಬರುವ ಪಾತ್ರಗಳ ಹೆಸರನ್ನೇ ಅವರು ಇಡಲಿದ್ದಾರೆ ಎಂದು ತಿಳಿದು ಬಂದಿದೆ.

ಧ್ರುವ ಸರ್ಜಾ ಅವರು ಹನುಮನ ಭಕ್ತರು. ಆಂಜನೇಯನ ಕಂಡರೆ ಅವರಿಗೆ ಅಪಾರ ಭಕ್ತಿ. ರಾಮನ ಬಂಟ ಎಂಬ ಖ್ಯಾತಿ ಆಂಜನೇಯನಿಗೆ ಇದೆ. ಈ ಕಾರಣದಿಂದಲೇ ರಾಮ ಮಂದಿರದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದ ದಿನವೇ ಮಕ್ಕಳಿಗೆ ನಾಮಕರಣ ಮಾಡಲು ಅವರು ಮುಂದಾಗಿದ್ದಾರೆ. ಚಿರು ಸರ್ಜಾ ಸಮಾಧಿ ಇರೋ ನೆಲಗುಳಿಯಲ್ಲಿ ಮಕ್ಕಳ ನಾಮಕರಣ ಶಾಸ್ತ್ರ ನಡೆಯಲಿದೆ.

ಧ್ರುವ ಸರ್ಜಾ ಹಾಗೂ ಪ್ರೇರಣ ದಂಪತಿಗೆ ಈಗ ಇಬ್ಬರು ಮಕ್ಕಳು. ಮಗಳು ಜನಿಸಿ ಸಾಕಷ್ಟು ಸಮಯ ಕಳೆದಿದೆ. ಆದಾಗ್ಯೂ ಅವರು ಮಗಳಿಗೆ ಹೆಸರನ್ನು ಇಟ್ಟಿರಲಿಲ್ಲ. ಈಗ ಒಂದೇ ದಿನ ಇವರ ನಾಮಕರಣ ನಡೆಯುತ್ತಿರುವುದು ವಿಶೇಷ. 2022ರ ಅಕ್ಟೋಬರ್2 ರಂದು ಮಗಳ ಜನನ ಆಗಿತ್ತು. 2023ರ ಸೆಪ್ಟೆಂಬರ್ ನಲ್ಲಿ ಗಂಡು ಮಗು ಜನಿಸಿತ್ತು. ಈ ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬ ಭಾಗಿ ಆಗಲಿದೆ. ರಾಮಾಯಣ ಹಾಗು ಮಹಾಭಾರತದಲ್ಲಿನ ಹೆಸರನ್ನ ಮಕ್ಕಳಿಗೆ ಇಡೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

 

Related