ಕಲ್ಲಂಗಡಿ ಹಣ್ಣಿನ ಹಲವಾರು ಲಾಭಗಳು

ಕಲ್ಲಂಗಡಿ ಹಣ್ಣಿನ ಹಲವಾರು ಲಾಭಗಳು

ಬೇಸಿಗೆ ಕಾಲ ಶುರುವಾಗುತಿದಂತೆ ಜನರು ಬಿಸಿಲಿನ ಬೇಗೆಯನ್ನು ಕಡಿಮೆ ಮಾಡಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುತ್ತಾರೆ.  ಎಳನೀರು, ಕರ್ಬುಜ, ಕಲ್ಲಂಗಡಿ ಹಣ್ಣಿನಂತಹ ಹಲವಾರು ರೀತಿಯ ತಂಪಾದ ಪದಾರ್ಥಗಳನ್ನು ತಿನ್ನಲು ಬಯಸುತ್ತಾರೆ.

ಹೌದು, ಈ ಬೇಸಿಗೆಯಲ್ಲಿ ಹೇಳಿ ಮಾಡಿಸಿದ ಹಣ್ಣು ಕಲ್ಲಂಗಡಿ. ಬೇಸಿಗೆ ಕಾಲ ಹಣ್ಣಾದ ಕಲ್ಲಂಗಡಿಯಲ್ಲಿ ನೀರಿನಾಂಶ ಹೆಚ್ಚಾಗಿದೆ. ಹೀಗಾಗಿ ಎಲ್ಲರೂ ಇಷ್ಟಪಟ್ಟು ಕಲ್ಲಂಗಡಿ ತಿನ್ನುತ್ತಾರೆ. ಬರೀ ಹಣ್ಣು ತಿಂದು ಸಿಪ್ಪೆಯನ್ನು ಬಿಸಾಡುತ್ತಾರೆ. ಆದರೆ ಈ ಸಿಪ್ಪೆಯಿಂದಲೂ ಅನೇಕ ಪ್ರಯೋಜನಗಳಿವೆ.

ತ್ವಚೆಯ ಆರೈಕೆ: ಕಲ್ಲಂಗಡಿ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಎ ಮತ್ತು ಸಿ ಅಂಶವಿದೆ. ಅವು ತ್ವಚೆಯನ್ನು ರಕ್ಷಿಸುತ್ತವೆ. ಆದ್ದರಿಂದ, ಕಲ್ಲಂಗಡಿ ಸಿಪ್ಪೆಯನ್ನು ಅರೆದು ಚರ್ಮಕ್ಕೆ ಅಪ್ಲೈ ಮಾಡಬಹುದು. ಕಲ್ಲಂಗಡಿ ಸಿಪ್ಪೆಯನ್ನು ಮಿಕ್ಸರ್​​ನಲ್ಲಿ ಹಾಕಿ, ಜ್ಯೂಸ್ ನಂತೆ ಮಾಡಿ ದೇಹಕ್ಕೆ ಹಚ್ಚಿಕೊಳ್ಳಬಹುದು. ನೈಸರ್ಗಿಕ ಫೇಸ್‌ಪ್ಯಾಕ್‌ನಂತೆ ಬಳಸಬಹುದು.

ಕಾಂಪೋಸ್ಟಿಂಗ್: ಕಲ್ಲಂಗಡಿ ಸಿಪ್ಪೆಯಲ್ಲಿ ಸಾರಜನಕವಿದೆ. ಹಾಗಾಗಿ ಇವುಗಳನ್ನು ಕಾಂಪೋಸ್ಟ್ ಗುಂಡಿಗೆ ಹಾಕಿದರೆ 90 ದಿನಗಳ ನಂತರ ನೈಸರ್ಗಿಕ ಗೊಬ್ಬರ, ವರ್ಮಿಕಾಂಪೋಸ್ಟ್ ಆಗಿ ಬದಲಾಗುತ್ತದೆ. ಇದನ್ನು ಗಿಡಗಳಿಗೆ ಹಾಕಿದರೆ ಗಿಡಗಳು ಚೆನ್ನಾಗಿ ಬೆಳೆಯುತ್ತವೆ.

ಪ್ರಾಣಿಗಳಿಗೆ ಆಹಾರ: ನಾವು ಕಲ್ಲಂಗಡಿ ಹಣ್ಣನ್ನು ತಿಂದು, ಅದರ ಸಿಪ್ಪೆಯನ್ನು ಬಿಸಾಡದೆ ಪ್ರಾಣಿಗಳಿಗೆ ನೀಡಬಹುದು. ಹಸು, ಕುರಿ-ಮೇಕೆಯಂತಹ ಸಸ್ಯಾಹಾರಿ ಪ್ರಾಣಿಗಳಿಗೆ ಕೊಡಬಹುದು.

ಕ್ರಾಫ್ಟ್​ ಪ್ರಾಜೆಕ್ಟ್​ಗೆ ಬಳಕೆ: ಕಸದಿಂದ ರಸ ಎಂಬ ಮಾತನ್ನು ಕೇಳಿದ್ದೇವೆ. ಅಂತೆಯೇ ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ಅನೇಕ ಅಲಂಕಾರಿಕ ಕ್ರಾಫ್ಟ್​ಗಳನ್ನು ತಯಾರಿಸಬಹುದು. ನಿಮಗೆ ಇದರ ಬಗ್ಗೆ ಗೊಂದಲಗಳಿದ್ದರೆ, ಯೂಟ್ಯೂಬ್​ನಲ್ಲಿ ಅನೇಕ ವಿಡಿಯೋಗಳು ಸಿಗುತ್ತವೆ. ಅವುಗಳ ಸಹಾಯ ತೆಗೆದುಕೊಳ್ಳಿ.

ಕಲ್ಲಂಗಡಿ ಸಿಪ್ಪೆಯನ್ನು ಹಲವು ವಿಧಗಳಲ್ಲಿ ಬಳಸಬಹುದು. ಇದನ್ನು ಅಡುಗೆಯಲ್ಲಿ, ಚರ್ಮದ ಆರೈಕೆಗಾಗಿ, ಕರಕುಶಲ ತಯಾರಿಕೆಯಲ್ಲಿ, ಗೊಬ್ಬರವಾಗಿ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಅನೇಕ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣಿನ ಸಿಪ್ಪೆಯನ್ನು ಬಳಸುವುದರಿಂದ ನಮಗೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ.

Related