ಬೆಳ್ಳಗೆ ಆಗಬೇಕಾ..? ಹಾಗಾದ್ರೆ ಇದನ್ನು ಸೇವಿಸಿ

ಬೆಳ್ಳಗೆ ಆಗಬೇಕಾ..? ಹಾಗಾದ್ರೆ ಇದನ್ನು ಸೇವಿಸಿ

ಬೆಂಗಳೂರು, ಮಾ. 02: ಇತ್ತೀಚಿನ ದಿನಗಳಲ್ಲಿ ಮೈ ಕಾಂತಿ ಹೆಚ್ಚಿಸಲು ಮಾರುಕಟ್ಟೆಯಲ್ಲಿ ಹಲವಾರು ಮಿಶ್ರಾ ಔಷಧಿಗಳು ಸಿಗುತ್ತಿದ್ದು, ಇಂತಹ ಔಷಧಿಗಳನ್ನು ಮಹಿಳೆಯರು ಹಾಗೂ ಹುಡುಗರು ಇದನ್ನು ಬಳಸಿ ತಮ್ಮ ಕಾಂತಿಯನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಉಪಯೋಗಿಸಿ ನಮ್ಮ ಮೈಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

ಲಿಂಬೆ ಪಾನೀಯ: ಪುರಾತನ ಕಾಲದಿಂದಲೂ ಮೈಕಾಂತಿಯನ್ನ ಹೆಚ್ಚಿಸಲು ನಿಂಬೆಹಣ್ಣನ್ನು ಉಪಯೋಗಿಸುತ್ತಾ ಬಂದಿದ್ದಾರೆ. ಇದು ಆರೋಗ್ಯಕರ ಕಾಂತಿ ನೀಡುವುದರ ಜೊತೆಗೆ ನೀರು ಮತ್ತು ಲಿಂಬೆ ರಸವು ವಯಸ್ಸಾಗುವ ಲಕ್ಷಣಗಳು ಮತ್ತು ಬ್ಲ್ಯಾಕ್ ಹೆಡ್ ಮತ್ತು ನೆರಿಗೆ ನಿವಾರಣೆ ಮಾಡುವುದು ಹಾಗೂ ವಿಟಮಿನ್ ಸಿ ಹೊಂದಿರುವಂತಹ ಲಿಂಬೆಯು ನೈಸರ್ಗಿಕ ಬ್ಲೀಚ್ ಆಗಿ ಕೆಲಸ ಮಾಡುವುದು.

ಆಲೂಗಡ್ಡೆ: ಮುಖದ ಮೇಲೆ ಕಲೆಗಳು ಹಾಗೂ ಮೊಡವೆಗಳನ್ನು ನಿವಾರಿಸಲು ಆಲೂಗಡ್ಡೆಯನ್ನು ಬೆಳೆಸಬಹುದು.

ಹೌದು, ಆಲೂಗಡ್ಡೆ ರಸವನ್ನು ತೆಗೆದು ಮುಖದ ಮೇಲೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ಆಲೂಗಡ್ಡೆ ತುಂಡನ್ನು ಇಟ್ಟುಕೊಂಡು ನಿಧಾನವಾಗಿ ಅದರಿಂದ ಮಸಾಜ್ ಮಾಡಿಕೊಳ್ಳಿ. ಇದರಿಂದ ಕಲೆಗಳು, ಮೊಡವೆ ನಿವಾರಣೆ ಆಗುವುದು ಮತ್ತು ಚರ್ಮಕ್ಕೆ ಕಾಂತಿ ಬರುವುದು.

ಚಹಾ ಸೇವನೆ: ಸಾಮಾನ್ಯವಾಗಿ ಟೀ ಕಾಫಿ ಕುಡಿಯುವುದರಿಂದ ಮೈಕಾಂತಿ ಹಾಳಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ ಅಮೆರಿಕಾದ ಅಧ್ಯಯನವೊಂದು ಹೇಳಿರುವ ಪ್ರಕಾರ ಚಾ ಕುಡಿದರೆ ಅದು ಚರ್ಮ ಸುಡುವ ಮತ್ತು ಗಡಸುಗೊಳಿಸುವ ಪೆರಾಕ್ಸೈಡ್ ನ್ನು ಕಡಿಮೆ ಮಾಡುವುದು. ಇದಕ್ಕೆ ಚಾದಲ್ಲಿ ಇರುವಂತಹ ಪ್ರಬಲ ಆಂಟಿಆಕ್ಸಿಡೆಂಟ್ ಪಾಲಿಫೆನಾಲ್ ಕಾರಣವಾಗಿದೆ.

ಚಾಕಲೇಟ್: ಚರ್ಮದ ವಿನ್ಯಾಸ ಬದಲಾಯಿಸುವುದು ಮತ್ತು ಯುವಿ ಕಿರಣಗಳ ವಿರುದ್ಧ ಹೋರಾಡುವುದು. ಚಾಕಲೇಟ್ ನಲ್ಲಿ ಇರುವಂತಹ ಕೋಕಾ ಪಾಲಿಫೆನಾಲ್ಸ್ ಮತ್ತು ಫ್ಲಾವನಾಯ್ಡ್ ಗಳು ಅದ್ಭುತ ಆಂಟಿಆಕ್ಸಿಡೆಂಟ್ ಗಳಾಗಿದ್ದು, ಇದು ಚರ್ಮವನ್ನು ಬಿಳಿಯಾಗಿಸಲು ನೆರವಾಗುವುದು.

ವಿಟಮಿನ್ ಸಿ: ಹಣ್ಣು ಹಾಗೂ ತರಕಾರಿಗಳಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದ್ದು, ಚರ್ಮದ ಆರೋಗ್ಯ ಮತ್ತು ಕಾಂತಿ ಕಾಪಾಡಲು ಇದು ನೆರವಾಗುವುದು.

 

 

Related