ಔರಾದ: ಖತರ್ನಾಕ್ ಖಿಲಾಡಿಗಳು ಬಹಳ ಉಪಾಯದಿಂದ ಗಾಂಜಾವನ್ನು ಸಾಗಿಸುತ್ತಿದ್ದರು. ಆದರೆ ಖಡಕ್ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 15 ಕೋಟಿ ವೆಚ್ಚದ ಗಾಂಜಾವನ್ನು ANTI NARCOTICS SQUAD BIDAR ನ ರಘುವೀರ್ ಸಿಂಗ್ CPI ಮತ್ತು ತಂಡ ವಶಪಡಿಸಿಕೊಂಡಿದ್ದಾರೆ..
ಹೌದು, ಒರಿಸ್ಸಾ ರಾಜ್ಯದ ಮಲ್ಕಾನ್ಗಿರಿ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಗಾಂಜಾವನ್ನು ತುಂಬಿಕೊಂಡು ಮಹಾರಾಷ್ಟ್ರಕ್ಕೆ ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ NCB ಬೆಂಗಳೂರು ತಂಡ ಹಿಂಬಾಲಿಸಿಕೊಂಡು ಜಿಲ್ಲೆಯ ಗಡಿ ಭಾಗ ವನಮಾರಪಳ್ಳಿಯ ಬಳಿ ANTI NARCOTICS SQUAD BIDAR ನ ರಘುವೀರ್ ಸಿಂಗ್ CPI ಮತ್ತು ತಂಡ ಜಂಟಿಯಾಗಿ ಸದರಿ ಲಾರಿಯನ್ನು ತಡೆದು ಆರೋಪಿಗಳನ್ನ ವಶಕ್ಕೆ ಪಡೆದು ಔರಾದ್ ಠಾಣೆಗೆ ಕರೆತಂದು ಪರಿಶೀಲನೆ ಮಾಡಲಾಗಿದ್ದು, ಮೇಲೆ ಸಿಮೆಂಟ್ ಇಟ್ಟಿಗೆಗಳನ್ನು ತುಂಬಿದ್ದು ಒಳಗಡೆ ಸೀಕ್ರೆಟ್ ಚೇಂಬರ್ ನಲ್ಲಿ ಗಾಂಜಾ ಪ್ಯಾಕೆಟ್ಗಳನ್ನು ಅಡಗಿಸಿದ್ದು ಅವುಗಳನ್ನು ನಿಯಮಾನುಸಾರ ವಶಪಡಿಸಿ ಕೊಳ್ಳಲಾಗಿದೆ.
ಸುಮಾರು1500 ಕೆ ಜಿ ವರೆಗೆ ಇರಬಹುದೆಂದು ಅಂದಾಜಿಸಲಾಗಿದ್ದು ಮೌಲ್ಯ 15 ಕೋಟಿಯಷ್ಟು ಆಗುತ್ತದೆ ಎಂದು ಅಂದಾಜಿಸಲಾಗಿದ್ದು NCB ಬೆಂಗಳೂರು ನವರಿಂದ ತನಿಖೆ ಪ್ರಗತಿಯಲ್ಲಿದೆ.