ಸಿಡಿಲು ಬಡಿದು ಎಮ್ಮೆ ಸಾವು: ವ್ಯಕ್ತಿ ಅಸ್ವಸ್ಥ

ಸಿಡಿಲು ಬಡಿದು ಎಮ್ಮೆ ಸಾವು: ವ್ಯಕ್ತಿ ಅಸ್ವಸ್ಥ

ಬೀದರ್:  ತಾಲ್ಲೂಕಿನ ನಿಡೋದಾ ಗ್ರಾಮದ ಹೊಲದಲ್ಲಿ ಭಾನುವಾರ ಮಧ್ಯಾಹ್ನ ೩ ಗಂಟೆಗೆ ಸಿಡಿಲು ಬಡಿದು ಶ್ರೀಕಾಂತ ತಂದೆ ಮೊನಪ್ಪಾ ಪಾಂಚಾಳ ಅವರ ಒಂದು ಎಮ್ಮೆ ಸಿಡಿಲಿನಿಂದ ಸಾವಿಗೀಡಾಗಿದೆ. ಎಮ್ಮೆಯ ಮಾಲೀಕನಾದ ಶ್ರೀಕಾಂತ ಮೊನಪ್ಪಾ ಅವರಿಗೆ ಸಿಡಲಿನ ಶಾಖದಿಂದ ಅಸ್ವಸ್ಥ ಗೊಂಡು ಠಾಣಾ ಕುಶನೂರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಭಾನುವಾರ ಮಧ್ಯಾಹ್ನ೩ ಗಂಟೆಗೆ ಬಿರುಸಿನ ಗಾಳಿ, ಮಳೆ ಸುರಿದಿದೆ.‌ ಈ ಸಂದರ್ಭದಲ್ಲಿ ಸಿಡಿಲು ಬಡಿದಿದೆ.ಠಾಣಾ ಕುಶನೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸುಧಾಕರ ಧನರಾಜ ಗ್ರಾಪಂ ಸದಸ್ಯ ನಾಗರಾಜ ಬಿರಾದಾರ,ಲಕ್ಷ್ಮಣ,ಶಿವು ಪಾಂಚಾಳ ಇದ್ದರು.

Related