ಮನೆಯೊಳಗೆ ಡೈನಾಸರ್ – ಅನುಷ್ಕಾ

ಮನೆಯೊಳಗೆ ಡೈನಾಸರ್ – ಅನುಷ್ಕಾ

ಮುಂಬೈ: ಹಾಸ್ಯ ಎಲ್ಲ ವೃತ್ತಿಯಲ್ಲೂ ಹಾಸುಹೊಕ್ಕಾಗಿರುತ್ತದೆ. ನಮಗೆ ಅದನ್ನು ಆಸ್ವಾದಿಸುವ, ಆನಂದಿಸುವ ಮನ:ಸ್ಥಿತಿ ಹಾಸ್ಯಪ್ರಜ್ಞೆ ಬೇಕಷ್ಟೇ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನೆಯಲ್ಲಿದ್ದಾಗೆ ಸುಮ್ಮನೆ ಕೂಳಿತುಕೊಳ್ಳುವುದಿಲ್ಲ. ಏನ್ನಾದರೊಂದು ಕಾಮಿಡಿ ಝಲಕ್ ಮಾಡ್ತಾನೆ ಇರುತ್ತಾರೆ.

ಮೈದಾನದಲ್ಲಿ ಆಂಗ್ರಿ ಯಂಗ್ ಮ್ಯಾನ್ ಆಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನೆಯಲ್ಲಿದ್ದಾಗ ಎಷ್ಟೆಲ್ಲಾ ಮೋಜು ಮಾಡುತ್ತಾರೆ ಎಂಬುದಕ್ಕೆ ಪತ್ನಿ ಅನುಷ್ಕಾ ಶರ್ಮಾ ಪ್ರಕಟಿಸಿರುವ ಲೇಟೆಸ್ಟ್ ವಿಡಿಯೋವೇ ಸಾಕ್ಷಿ.

ಡೈನೋಸಾರ್ ಮಾದರಿ ಹೆಜ್ಜೆ ಹಾಕಿದ ವಿರಾಟ್ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಯ ಫನ್ನಿ ವಿಡಿಯೋವೊಂದನ್ನು ಅನುಷ್ಕಾ ಪ್ರಕಟಿಸಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. ಡೈನಾಸರ್ ರೀತಿಯಲ್ಲಿ ಹೆಜ್ಜೆ ಹಾಕುತ್ತಾ ಮನೆಯೊಳಗೆ ಬರುವ ವಿರಾಟ್ ಅವತಾರ ನೋಡಿ ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ.

ಈ ವಿಡಿಯೋ ಜತೆಗೆ ‘ಮನೆಯೊಳಗೆ ಬರುವ ಡೈನಾಸರ್ ಒಂದನ್ನು ನೋಡಿದೆ’ ಎಂದು ಅನುಷ್ಕಾ ತಮಾಷೆಯಾಗಿ ಬರೆದುಕೊಂಡಿದ್ದಾರೆ.

Related