ನಗರದಲ್ಲಿ ವಿವಿಧ ಬೇಡಿಕೆ ಸರಣಿ ಪ್ರತಿಭಟನೆ

ನಗರದಲ್ಲಿ ವಿವಿಧ ಬೇಡಿಕೆ ಸರಣಿ ಪ್ರತಿಭಟನೆ

ಕಲಬುರ್ಗಿ : ತಾಲೂಕು ನಗರ ಮಟ್ಟದಲ್ಲಿ ಅಂಗವಿಕಲರ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಸೃಜಿಸಿ ನೇಮಕಾತಿ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿಧೋದ್ದೇಶ ಎಂಆರ್ ಡಬ್ಲ್ಯು ಮತ್ತು ಗ್ರಾಮೀಣ ಪುನರ್ವಸತಿ ವಿಆರ್ ಡಬ್ಲ್ಯು ಕಾರ್ಯಕರ್ತರ ರಾಜ್ಯ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾವಣೆಗೊಂಡ ಹಲವು ಅಂಗವಿಕಲರು ಹಾಗೂ ಒಕ್ಕೂಟದ ಸದಸ್ಯರು, ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

ಈಗ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್‌ಡಬ್ಲ್ಯು ಅವರನ್ನು ತಾಲೂಕು ಅಂಗವಿಕಲರ ಅಭಿವೃದ್ಧಿ ಅಧಿಕಾರಿಯಾಗಿ, ವಿಆರ್‌ಡಬ್ಲ್ಯು ಗ್ರಾಮ ಮಟ್ಟದ ಅಭಿವೃದ್ಧಿ ಅಧಿಕಾರಿ ಆಗಿ, ಯುಆರ್‌ಡಬ್ಲ್ಯು ಅವರನ್ನು ನಗರ ಅಂಗವಿಕಲರ ಅಭಿವೃದ್ಧಿ ಸಹಾಯಕ ಅಧಿಕಾರಿ ಆಗಿ ನೇಮಕ ಮಾಡಬೇಕು ಎಲ್ಲ ಹುದ್ದೆಗಳನ್ನು ಕಾಯಂಗೊಳಿಸಬೇಕು ಎಂದೂ ಆಗ್ರಹಿಸಿದರು.

ನಿವೃತ್ತರಾದ ಎಂಆರ್‌ಡಬ್ಲ್ಯು ಅವರಿಗೆ 25 ಲಕ್ಷ ರೂ. ವಿಆರ್‌ಡಬ್ಲ್ಯು ಅವರಿಗೆ 20 ಲಕ್ಷದ ಇಡಗಂಟು ನೀಡಬೇಕು. ಆಕಸ್ಮಿಕವಾಗಿ ದುರ್ಘಟನೆಯಲ್ಲಿ ಮರಣ ಹೊಂದಿದರೆ ಅಂಥ ನೌಕರರಿಗೆ ಕನಿಷ್ಠ 50 ಸಾವಿರದಿಂದ 30 ಲಕ್ಷದವರೆಗೆ ಪರಿಹಾರ ನೀಡಬೇಕು. ಬ್ಯಾಕ್‌ಲಾಗ್ ಹುದ್ದೆಗಳನ್ನು ಕೂಡಲೇ ನೇಮಕ ಮಾಡಿಕೊಳ್ಳಬೇಕು. ಮಾಸಾಶನವನ್ನು 5 ಸಾವಿರಕ್ಕೆ ಏರಿಸಬೇಕು ಎಂದೂ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಒಕ್ಕೂಟದ ನಿರ್ದೇಶಕ ಬಸವರಾಜ ಜಿ. ಹಡಪದ, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಮಂತ ಎಸ್. ಮಳಖೇಡ, ಪ್ರಧಾನ ಕಾರ್ಯದರ್ಶಿ ನಾನಾಗೌಡ ಸಿ. ಹೊನ್ನಳ್ಳಿ, ಖಜಾಂಚಿ ಖಾಸಿಂಸಾಬ್ ಐ. ಡೊಂಗರಗಾಂವ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Related