ನಾಗರದಿನ್ನಿ ಶಾಲೆಗೆ ಎರಡು ಹೊಸ ಕೋಣೆಗಳು

  • In State
  • August 5, 2021
  • 360 Views
ನಾಗರದಿನ್ನಿ ಶಾಲೆಗೆ ಎರಡು ಹೊಸ ಕೋಣೆಗಳು

ಕೊಲ್ಹಾರ: ನಾಗರದಿನ್ನಿ ಗ್ರಾಮದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗೆ ಶೀಘ್ರದಲ್ಲಿಯೇ ಸುಸಜ್ಜಿತವಾದ 2 ಕೋಣೆಗಳ ನಿರ್ಮಾಣ ಮಾಡಲು  ಸರ್ಕಾರದಿಂದ ಮಂಜೂರು ಮಾಡಿಸಲು ಪ್ರಯತ್ನಮಾಡುತ್ತೇನೆಂದು ಶಾಸಕ ಶಿವಾನಂದ ಪಾಟೀಲ್ ಗುರುವಾರ ಇಲ್ಲಿ ಭರವಸೆ ನೀಡಿದರು. ಮಟ್ಟಿಹಾಳ ಗ್ರಾಮದ ಶಾಲಾಆವರಣದಲ್ಲಿ 45 ಲಕ್ಷ ವೇಚ್ಚದಲ್ಲಿ ಜಿ.ಪಂ, ಲೋಕೊಪಯೋಗಿ ಇಲಾಖೆ ಅಡಿಯಲ್ಲಿ 3 ಕೋಣೆಗಳ ನಿರ್ಮಾಣವಾಗಿವೆ. ಯಲ್ಲಮ್ಮ ದೇವಸ್ಥಾನ ಜೀರ್ಣೋದ್ಧಾರ, ಸಮುದಾಯ ಭವನ ನಿರ್ಮಾಣಕ್ಕಾಗಿ 2 ಲಕ್ಷ ರೂಗಳ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದರು. ಈ ವೇಳೆ ರಮೇಶ ಬಿರಾದಾರ, ಪ್ರದೀಪ ಪಾಟಿಲ್, ಶ್ರೀಕಾಂತ ಗಣಿ, ನಿಂಗಪ್ಪ ಹಳ್ಳೂರ, ಮಹೇಶ ತೊಟಗೆರ, ಶಿವಾನಂದ ಮನಗೂಳಿ, ಈರಣ್ಣ ಬಿರಾದಾರ, ಉಮೇಶ ಒಂಟಗೊಡಿ, ಅಲ್ಲಿಸಾಬ್ ಕಲ್ಲಗೊರಿ ಇದ್ದರು.

Related